ಪಟ್ಟಣದ ನಾಗಲಿಂಗೇಶ್ವರ ಕಾಲೋನಿಯಲ್ಲಿರುವ ‘ಸಿವಿಲ್ ಇಂಜಿನಿಯರ್ಸ್ ಮತ್ತು ವಾಸ್ತುಶಿಲ್ಪ ಸಂಘ’ದ ಕಚೇರಿಯಲ್ಲಿ ಭಾರತದ ಮಹಾನ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ 166ನೇ ಜಯಂತ್ಯೋತ್ಸವದ ಅಂಗವಾಗಿ ಇಂಜಿನಿಯರ್ಸ್ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಆರ್. ವಿ. ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, “ಚಿಕ್ಕೋಡಿ ಪಟ್ಟಣದ ಇಂಜಿನಿಯರ್‌ಗಳ ಬೇಡಿಕೆಗೆ ತಕ್ಷಣ ಸ್ಪಂದಿಸಲಾಗುವುದು. ಸಂಘದ ಕಚೇರಿ ನಿರ್ಮಾಣಕ್ಕಾಗಿ 5,000 ಚದರ ಅಡಿ ಜಾಗವನ್ನು ಶೀಘ್ರದಲ್ಲೇ ಒದಗಿಸಲು ವ್ಯವಸ್ಥೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ತಾವು ಒಟ್ಟಾಗಿ ಚಿಕ್ಕೋಡಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದ ಅವರು, ಈಗಾಗಲೇ ಪಟ್ಟಣದಲ್ಲಿ ಕೋರ್ಟ್, ಕೆರೆ ಅಭಿವೃದ್ಧಿ, ಸರ್ಕಿಟ್ ಹೌಸ್ ಹಾಗೂ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿರುವುದನ್ನು ಸ್ಮರಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಚಿಕ್ಕೋಡಿ ಅಭಿವೃದ್ಧಿಗೆ 20 ಕೋಟಿ ರೂಪಾಯಿ ವಿಶೇಷ ಅನುದಾನ ತರಲಾಗುವುದು. ಅದಕ್ಕೆ ಅಗತ್ಯವಿರುವ ಸ್ಥಳಾವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆರ್. ವಿ. ಹಿರೇಮಠ, ಇಸಾ ನಾಯಕವಾಡಿ, ವಿದ್ಯಾಸಾಗರ ಇಟ್ಟಿ ಹಾಗೂ ಎಂ. ಜಿ. ಮುತ್ಯಪಗೊಳ ಅವರು ಮಾತನಾಡಿ ಶುಭಕೋರಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹೇಶ ನೆರ್ಲೆ, ಕಾರ್ಯದರ್ಶಿ ಕರನಸಿಂಗ ಹವಾಲ್ದಾರ, ಸಹ ಕಾರ್ಯದರ್ಶಿ ಶಶಿಕಾಂತ ಕಾಂಬಳೆ, ಖಜಾಂಚಿ ಆಸೀಫ್ ಪಟಾನ, ಇಸಾ ನಾಯಕವಾಡಿ, ಎಂ. ಜೆ. ಮುತ್ಯಾಪಗೊಳ ,ಬಾಬು ಸಮತಶೆಟ್ಟಿ,ಲಕ್ಷ್ಮೀ ಸಾಗರ ಈಟಿ
ತಬಾರಕ ಸಯ್ಯದ್, ಸೂಲೆಮಾನ ನಾಲಬಂದ, ಮಹಾಂತೇಶ ತಾಕಳಿ, ರಾಘವೇಂದ್ರ ಬಾಡ್ಕರ, ರಮೀಜ ಜಕಾತಿ, ರಿಜ್ವಾನ ಕಡಗಾಂವಕರ,ಶೋಹೆಬ ಝಾಡವಾಲೆ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಗೂ ಸ್ಥಳೀಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.
