State

ಸಚಿವ ಸತೀಶ ಜಾರಕಿಹೊಳಿ ಇಡಿ ದಾಳಿ ವಿರುದ್ಧ ಫ್ರೀಡಂ ಪಾರ್ಕ್’ನಲ್ಲಿ ಗರ್ಜಿಸಿದ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಬೆಳವಡಿ

Share

ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರ ವಿರುದ್ಧ ನಡೆದಿರುವ ಇಡಿ ದಾಳಿ ಖಂಡಿಸಿ ಇಂದು ನಡೆದ ಫ್ರೀಡಂ ಪಾರ್ಕಿನಲ್ಲಿ ಜರುಗಿದ ಬೃಹತ್ ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಬೆಳವಡಿ ಅವರು ಮಾತನಾಡಿ ಇದು ಕೇವಲ ಒಂದು ದಾಳಿಯ ವಿರುದ್ಧದ ಪ್ರತಿಭಟನೆಯಲ್ಲ, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗೆ ಉತ್ತರ ಕೇಳುವ ಹೋರಾಟ ಇಡಿ ದಾಳಿಗಳು ಪದೇ ಪದೇ ಕಾಂಗ್ರೆಸ್ ನಾಯಕರ ಮೇಲೆಯೇ ಏಕೆ? ಬಿಜೆಪಿ ನಾಯಕರ ವಿರುದ್ಧ ವಿರುದ್ಧ ಕೇಳಿ ಬರುತ್ತಿರುವ ಗಂಭೀರ ಆರೋಪಗಳ ಕುರಿತು ಇದೇ ರೀತಿಯ ತನಿಖೆಗಳು ಏಕೆ ನಡೆಯುತ್ತಿಲ್ಲ? ಸತೀಶ್ ಜಾರಕಿಹೊಳಿ ಕೇವಲ ಒಬ್ಬ ರಾಜಕಾರಣಿಯಲ್ಲ ಅವರು ಉದ್ಯಮಿಯೂ ಆಗಿದ್ದು ಜನಪರ ಹೋರಾಟಗಳ ಮೂಲಕ ತಮ್ಮದೇ ಆದ ರಾಜಕೀಯ ಶಕ್ತಿ ಮತ್ತು ಜನಬೆಂಬಲವನ್ನು ಕಟ್ಟಿಕೊಂಡಿರುವ ನಾಯಕರು ಅಂತಹಾ ಪ್ರಬಲ ನಾಯಕತ್ವವನ್ನು ತನಿಖಾ ಸಂಸ್ಥೆಗಳ ಮೂಲಕ ರಾಜಕೀಯವಾಗಿ ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ನಾವು ತನಿಖೆಯ ವಿರುದ್ಧವಲ್ಲ,ಆಯ್ದ ತನಿಖೆಯ ವಿರುದ್ಧ ನಾವು ಕಾನೂನಿನ ವಿರುದ್ಧವಲ್ಲ, ಕಾನೂನಿನ ದುರ್ಬಳಕೆಯ ವಿರುದ್ಧ, ನಾವು ಅಧಿಕಾರದ ವಿರುದ್ಧವಲ್ಲ,ಅಧಿಕಾರದ ರಾಜಕೀಯ ದುರ್ಬಳಕೆಯ ವಿರುದ್ಧ ಸತ್ಯವನ್ನು ಎಷ್ಟು ಒತ್ತಡದಿಂದಲೂ ಶಾಶ್ವತವಾಗಿ ಮೌನಗೊಳಿಸಲು ಸಾಧ್ಯವಿಲ್ಲ ಸತೀಶ ಜಾರಕಿಹೊಳಿ ಪರವಾಗಿ, ನ್ಯಾಯದ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮನ ನಾಡಿದ ಚನ್ನಮ್ಮಳತೆ ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಜರುಗಿದ ಬೃಹತ್ ಪ್ರತಿಭಟನೆಯಲ್ಲಿ ಅಶ್ವಿನಿ ಬೆಳವಡಿ ಅವರು ಗರ್ಜಿಸಿದರು .ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿದಂತೆ ರಾಜ್ಯಮಟ್ಟದ ಹಿರಿಯ ನಾಯಕರು ಉಪಸ್ಥಿತರಿದ್ದರು.

Tags:

error: Content is protected !!