Belagavi

ಮಹಾಪಾಲಿಕೆ ಆಯುಕ್ತರಿಂದ ಕೋಟೆ ಕೆರೆ ಅಭಿವೃದ್ಧಿ ಕಾರ್ಯ ಪರಿಶೀಲನೆ

Share

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಂದ ಕೋಟೆ ಕೆರೆ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲಾಯಿತು.

ಗುರುವಾರ ಕೋಟೆ ಕೆರೆಗೆ ಭೇಟಿ ನೀಡಿದ್ದ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು, ಅಮೃತ ಯೋಜನೆ ಅಡಿಯಲ್ಲಿ ಕೋಟೆ ಕೆರೆ ಹಾಗೂ ಆವರಣದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಸೀಲಿಸಿದರು. ಸ್ಥಳದಲ್ಲಿದ್ದ ಅಭಿಯಂತರಗಳಿಂದ ಮಾಹಿತಿ ಪಡೆದ ಅವರು, ಕೆಲವು ಸಲಹೆ ಸೂಚನೆಗಳನ್ನು ನೀಡಿದರಲ್ಲದೇ ಯೋಜನೆಯ ನೀಲನಕ್ಷೆ ಪ್ರಕಾರ ನಿಗದಿತ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾಮಗಾರಿಗಳು ಮುಗಿಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಭಿಯಂತರುಗಳಾದ ಲಕ್ಷ್ಮೀ ಸುಳಗೇಕರ್, ಅನೂಪ, ಅಮೃತ ಯೋಜನೆಯ ಅಭಿಯಂತರಗಳು, ಗುತ್ತಿಗೆದಾರರು, ವಿವೇಕ ಮಠದ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!