State

ಇಡಿಗೆ ದೂರು ನೀಡಿದವರು ಯಾರೆಂದು ಗೊತ್ತಿದೆ…

Share

ಇಡಿಗೆ ದೂರು ಯಾರು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅವರ ರಿಲೇಷನ್ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಆದರೇ ಅವರ ಓಟರ್ಸ್ ಇರುವುದು ಬಿಜೆಪಿಯಲ್ಲಿ. ಇಡಿ ದಾಳಿ ನನಗೆ ಡ್ಯಾಮೇಜ್ ಅಲ್ಲ. ಇಡಿ ಅಧಿಕಾರಿಗಳ ಮುಂದೆ ನಾನು ಸ್ಪಷ್ಟನೆ ನೀಡ್ತೇನೆ. ಬೆಂಬಲಕ್ಕೆ ನಿಂತ ವಿಜಯ್ ಮಲ್ಯ ಅವರಿಗೆ ಥ್ಯಾಂಕ್ಸ್ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಇಡಿಗೆ ದೂರು ಯಾರು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅದರ ಬಗ್ಗೆ ಸಿಎಂ ಗೆ ಹೇಳಿದ್ದೇವೆ. ಕೊಡಬಾರದು ಎಂದೇನಿಲ್ಲ. ಅಲಿಗೇಷನ್ ಮಾಡಲೂ ಎಲ್ಲರೂ ಸ್ವತಂತ್ರರಾಗಿದ್ದಾರೆ. ನಮ್ಮನ್ನ ನಾವು ಸಾಭೀತು ಮಾಡಲೂ ಇನ್ನು ಅವಕಾಶವಿದೆ. ಇಡಿ ಅಧಿಕಾರಿಗಳ ಮುಂದೆ ಸ್ಪಷ್ಟನೆ ನೀಡುತ್ತೇವೆ. ಪಕ್ಷದ ವಿಚಾರವನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದರು. ಅವರು ಯಾವ ಪಕ್ಷದವರು ಎಂಬುದನ್ನು ಹೇಳೋಕಾಗಲ್ಲ. ಅವರ ರಿಲೇಷನ್ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಆದರೇ ಅವರ ಓಟರ್ಸ್ ಇರುವುದು ಬಿಜೆಪಿಯಲ್ಲಿ. ಅಲ್ಲಿಯೂ ಫಿಫ್ಟಿ ಫಿಫ್ಟಿ ಇದೆ. ದೂರುದಾರರ ಹಿಂದೆ ಯಾವುದೇ ರಾಜಕೀಯ ಶಕ್ತಿಯಿಲ್ಲ.

ಇನ್ನು ಇಡಿ ದಾಳಿ ನನಗೆ ಡ್ಯಾಮೇಜ್ ಅಲ್ಲ. ಇಡಿ ಅಧಿಕಾರಿಗಳು ನೋಟಿಸ್ ಕೊಟ್ಟರೇ ಅದಕ್ಕೆ ನಾನು ಉತ್ತರ ಕೊಡುತ್ತೇನೆ. ಆಫ್ರಿಕಾದಲ್ಲಿ ಹೂಡಿಕೆ ಬಗ್ಗೆ ಅನುಮಾನ. ಹೂಡಿಕೆ ಮಾಡಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಇನ್ನು ಹೆಚ್ಚಿನ ತನಿಖೆ ನಡೆಸಬೇಕೆಂದು ಹೇಳಿದ್ದಾರೆ. ಆರೋಪಗಳ ಮೇಲೆ ಯಾವ ನಿರ್ಧಾರಕ್ಕೂ ಬರೋದಕ್ಕಾಗಲ್ಲ. ತನಿಖೆಯಾಗುತ್ತಿದೆ. ಆಗಲಿ. ನನ್ನನ್ನು ಕರೆದರೇ ಸಹಕರಿಸುತ್ತೇನೆ. ಇನ್ನು ಬಹಳಷ್ಟು ಪ್ರಕ್ರಿಯೆಗಳಿವೆ. ಇನ್ನು 3-4 ತಿಂಗಳು ಅವಕಾಶಗಳಿವೆ ಎಂದಿದ್ದಾರೆ.

ಇನ್ನು ತಮ್ಮ ಬೆಂಬಲಕ್ಕೆ ವಿಜಯ್ ಮಲ್ಯ ಅವರು ನಿಂತಿದ್ದಾರೆ ಎಂಬ ಪ್ರಶ್ನೆಗೆ ಥ್ಯಾಂಕ್ಸ್ ಥ್ಯಾಂಕ್ಸ್ ಎಂದು ಒಂದೇ ವಾಕ್ಯದಲ್ಲಿ ಉತ್ತರಿಸಿದರು.

Tags:

error: Content is protected !!