ಸಚಿವ ಸತೀಶ ಜಾರಕಿಹೋಳಿ ಯವರ ವಿರುದ್ಧ ವ್ಯವಸ್ಥಿತವಾದ ಪೀತೂರಿ ನಡೆದಿದೆ ಎಂದು ಬೆಳಗಾವಿ ಜಿಲ್ಲಾ ಲಿಂಗಾಯತ ಸಮಾಜದ ಮಹಿಳಾ ಅದ್ಯಕ್ಷೆ ಸುಜಾತಾ ಬೇಟೆಗಾರ ಹೇಳಿದರು.

ಸಚಿವ ಸತೀಶ ಜಾರಕಿಹೋಳಿ ಯವರ ನಿವಾಸಗಳ ಮೇಲೆ ಇ ಡಿ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಮಹಿಳಾ ಲಿಂಗಾಯತ ಸಮಾಜದ ಅದ್ಯಕ್ಷೆ ಸುಜಾತಾ ಬೇಟೆಗಾರ ಮಾದ್ಯಮಗಳೊಂದಿಗೆ ಮಾತನಾಡಿ ಸತೀಶ ಜಾರಕಿಹೋಳಿಯವರು ಜ್ಯಾತ್ಯಾತೀತ ರಾಜಕಾರಣಿ ಯಾಗಿದ್ದು ಅವರ ವಿರುದ್ಧ ವ್ಯವಸ್ಥಿತವಾದ ಪೀತೂರಿ ನಡೆಸಿ ಅವರ ಏಳ್ಗೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಇದಕ್ಕೆ ತಕ್ಕ ಉತ್ತರ ಸತೀಶ ಜಾರಕಿಹೋಳಿಯವರು ನೀಡಲಿದ್ದಾರೆ, ವಿದೇಶದಲ್ಲಿ ಮಾಡುವ ವ್ಯವಹಾರಕ್ಕೆ ಸೂಕ್ತ ಧಾಖಲೆ ನೀಡಿ ಹೋರ ಬರಲಿದ್ದಾರೆ ಎಂದರು
ಮಂಜುಳಾ ರಾಮಗೋನಟ್ಟಿ ಮಾತನಾಡಿ ಸತೀಶ ಜಾರಕಿಹೋಳಿ ಮೊದಲು ಉದ್ಯಮಿ ನಂತರ ರಾಜಕಾರಣಿ ಆದ್ದರಿಂದ ಅವರು ಮಾಡುವ ಉದ್ಯೋಗ ನ್ಯಾಯಯುತ ಮತ್ತು ಕಾನೂನಿನ ಅಡಿಯಲ್ಲಿ ಇರುತ್ತವೆ ಅದಕ್ಕೆ ತಕ್ಕ ಧಾಖಲೆ ನೀಡುತ್ತಾರೆ ಎಂದರು
ನಂತರ ಹುಕ್ಕೇರಿ ಕೋರ್ಟ ಸರ್ಕಲ್ ಬಳಿ ನೂರಾರು ಅಭಿಮಾನಿಗಳು ಸೇರಿ ಇ ಡಿ ಅಧಿಕಾರಿಗಳ ವಿರುದ್ಧ ಘೋಷನೆ ಖಂಡನೆ ಮಾಡಿದರು.
ಈ ಸಂದರ್ಭದಲ್ಲಿ ಜಾರಕಿಹೋಳಿ ಅಭಿಮಾನಿಗಳಾದ ಕರೆಪ್ಪಾ ಗುಡನ್ನವರ, ಸಂತೋಷ ಮುಡಷಿ, ಮಹೇಶ ಹಟ್ಟಿಹೋಳಿ, ವಿಠ್ಠಲ ಮಾದರ, ಮಂಜುಳಾ ರಾಮಗೋನಟ್ಟಿ, ನಿತೀಶ ಜಾಧವ, ಅನೀಲ ಪಾಟೀಲ,ಸುಜಾತಾ ಹಿರೇಮಠ, ಸುನೀತಾ ಕೋಳವಿ, ಲಕ್ಷ್ಮಣ ಹೂಲಿ, ಕೆಂಪಣ್ಣಾ ಶಿರಹಟ್ಟಿ, ಹಿಡಕಲ್, ಪ್ರಕಾಶ ಮೈಲಾಖೆ, ಕೆ ವೆಂಕಟೆಶ, ದೀಲಿಪ ಹೋಸಮನಿ ಮೊದಲಾದವರು ಉಪಸ್ಥಿತರಿದ್ದರು.
