ಸೆಪ್ಟೆಂಬರ್ 14 ರಂದು ಗಣೇಶೋತ್ಸ ಹಿನ್ನಲೆಯಲ್ಲಿ ಸಾಂತಿ ಸೌಹಾರ್ದತೆ ಹಬ್ಬ ಆಚರಣೆ ಭಾಗವಾಗಿ ಧಾರವಾಡದಲ್ಲಿ ಇಂದು ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ನೇತೃತ್ವದಲ್ಲಿ ಎಲ್ಲ ಧರ್ಮದ ಮುಖಡರೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಸ್ಲಿಂ, ಕ್ರೈಸ್ತ ಸೇರಿ ಹಿಂದೂ ಹಿರಿಯರು ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾನ ಪ್ರಮುಖರ ಭಾಗವಹಿಸಿದರು.


ನಗರದ ವಿದ್ಯಾವರ್ಧಕ ಸಂಘದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ ಭೂಷಣ್ ಬೊರಸೆ ನೇತೃತ್ವದಲ್ಲಿ ಗಣೇಶೋತ್ಸವ ಶಾಂತಿ ಸಭೆ ಜರುಗಿದ್ದು, ಸಭೆಗೆ ಹಿಂದೂ,ಮುಸ್ಲಿಂ ಸೇರಿ ಕ್ರೈಸ್ತ ಧರ್ಮ ಗುರುಗಳು, ಹಿರಿಯರು ಹಾಗೂ ಪ್ರಮುಖ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾನ ಪ್ರಮುಖರ ಭಾಗಿಯಾಗಿದ್ದರು. ಇನ್ನೂ ಸಭೆಯಲ್ಲಿ ಹಿರಿಯರ ಸಲಹೆ ಸೂಚನೆ ಆಲಿಸಿದ ಕಮಿಷನರ್ ಭೂಷಣ್‌ರವರು, ಕಾನೂನು ಪಾಲೆ ಎಲ್ಲರ ಜವಾಬ್ದಾರಿಯಾಗಿದೆ. ಹಬ್ಬ ಆಚರಣೆ ನೋಡಲು ಸವಿಯಲು ಮಾದರಿಯಾಗಿರಬೇಕು. ಎಲ್ಲದ ಧರ್ಮದವರು ಎಲ್ಲರ ಹಬ್ಬ ಆಚರಣೆಯನ್ನು ಒಟ್ಟಾಗಿ ಶಾಂತಿ ಸೌಹಾರ್ದೆಯಿಂದ ಆಚರಣೆ ಮಾಡಿದ್ದರೆ ಇನ್ನಷ್ಟು ಮೇರುಗೆ ಹೆಚ್ಚಾಗುತ್ತದೆ. ಆ ದೃಷ್ಟಿಕೋನದಲ್ಲಿ ಎಲ್ಲರೂ ಯೋಚನೆ ಮಾಡಬೇಕು. ಇನ್ನೂ ಗಣೇಶೋತ್ಸ ಸಂದರ್ಭದಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡರೆ ಅಥವಾ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳಲಾಗುವುದು. ಡಿಜೆ ವಿಚಾರದಲ್ಲಿ ಮಸ್ಟ್ ಆ್ಯಂಡ್ ಶುಡ್ ನಿಯಮ ಪಾಲಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
