Dharwad

ರಾಜ್ಯ ಸರ್ಕಾರದ ತಡೆಹಿಡದಿರುವ ಪರಿಷ್ಕೃತ ಕನಿಷ್ಠ ವೇತನ ವಿಳಂಬ ನೀತಿ ವಿರೋಧಿಸಿ ಧಾರವಾಡದಲ್ಲಿ ಪತ್ರ ಚಳುವಳಿ….

Share

ರಾಜ್ಯ ಸರ್ಕಾರ ತಡೆಹಿಡಿದಿರುವ ಪರಿಷ್ಕೃತ ಕನಿಷ್ಠ ವೇತನವನ್ನು ವಿಳಂಬ ನೀತಿ ಖಂಡಿಸಿ ಹಾಗೂ ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿ, ರಾಜ್ಯಮಟ್ಟದಲ್ಲಿ ರಚನೆಯಾದ ಕನಿಷ್ಠ ವೇತನ ಜಾರಿಗಾಗಿ ಹೋರಾಟ ಸಮಿತಿ ವತಿಯಿಂದ ಪತ್ರ ಚಳುವಳಿಯನ್ನು ಹಮ್ಮಿಕೊಂಡಿದ್ದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆ. ವಿ ಭಟ್ ಅವರು ಧಾರವಾಡದಲ್ಲಿ ಚಾಲನೆ ನೀಡಿದರು.

ನಗರದ ತಹಶೀಲ್ದಾರ ಕಚೇರಿ ಬಳಿಯ ಹೆಡ್ ಪೋಸ್ಟ ಕಚೇರಿ ಆವರಣದಲ್ಲಿ ಪತ್ರ ಚಳವಳಿಗೆ ಚಾಲನೆ ನೀಡಲಾಗಿದ್ದು, ಈವೇಳೆ ಮಾತನಾಡಿದ ಕೆ ವಿ ಭಟ್ ಅವರು, ಸುದೀರ್ಘ ಚರ್ಚೆಯ ನಂತರ ಸರ್ಕಾರವು ಕಳೆದ ಮೇ ತಿಂಗಳ 22 ರಂದು ನಿಗದಿತ ಉದ್ಯೋಗಗಳಿಗೆ ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಸುಮಾರು ಒಂಬತ್ತು ವರ್ಷಗಳ ನಂತರ ನಡೆದ ಈ ಪರಿಷ್ಕರಣೆಯನ್ನು ತಕ್ಷಣವೇ ಜಾರಿಗೆ ತರಬೇಕಾಗಿತ್ತು. ಪರಿಷ್ಕೃತ ವೇತನ ದರಗಳಂತೆ ರಾಜ್ಯ ಸರ್ಕಾರದ ಬಿಸಿಎಂ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪ. ಜಾ ಮತ್ತು ಪ. ಪಂ ಇಲಾಖೆಗಳು, ನಿಗಮ-ಮಂಡಳಿಗಳು, ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳಲ್ಲಿ ವೇತನ ಪಾವತಿಸಲಾಗಿದ್ದರೂ, ಹೆಚ್ಚಳವನ್ನು ವಿರೋಧಿಸಿರುವ ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಸರ್ಕಾರ ಜಾರಿಯನ್ನು ತಡೆಹಿಡಿದಿರುವುದು ಖಂಡನೀಯ. ಕನಿಷ್ಠ ವೇತನವು ಕಾರ್ಮಿಕರ ಕಾನೂನುಬದ್ಧ ಹಕ್ಕಾಗಿದ್ದು, ಅದನ್ನು ವಿಳಂಬಗೊಳಿಸುವುದು ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕನಿಷ್ಠ ವೇತನ ಜಾರಿಗಾಗಿ ರಾಜ್ಯಮಟ್ಟದಲ್ಲಿ ಹೋರಾಟ ಸಮಿತಿ ರಚನೆಯಾಗಿದ್ದು ಎಲ್ಲ ಇಲಾಖೆಗಳ ಕೈಗಾರಿಕೆಗಳ ಮತ್ತು ಎಲ್ಲ ಕಾರ್ಮಿಕರು ಈ ಚಳುವಳಿಯಲ್ಲಿ ತಮ್ಮ ಹಕ್ಕಿಗಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

Tags:

error: Content is protected !!