Hukkeri

ಹುಕ್ಕೇರಿ : ಸ್ವಾತಂತ್ರ್ಯ ಪಡೆಯಲು ಸಂಘಟನೆಗೆ ಸಹಾಯ ಮಾಡಿದವರು ಲಿಂಗಾಯತರು – ಜಯಮೃತ್ಯುಂಜಯ ಸ್ವಾಮಿಜಿ.

Share

ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆಗಳಿಗೆ ಸಹಾಯ ಮಾಡಿದವರು ಲಿಂಗಾಯತ ಸಮಾಜದವರಾಗಿದ್ದಾರೆ ಎಂದು ಕೂಡಲಸಂಗಮದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಹುಕ್ಕೇರಿ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಹಾಗೂ ಒಳ ಪಂಗಡಗಳ ಸೇವಾ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ರವದಿ ಫಾರ್ಮ ಹೌಸದಲ್ಲಿ ವಿರಕ್ತಮಠದ ಶಿವ ಬಸವ ಮಹಾಸ್ವಾಮಿಗಳ ಮತ್ತು ಹುಲ್ಲೊಳಿ ಹಟ್ಟಿಯ ಶಿವಾನಂದ ಮಠದ ಮಂಜುನಾಥ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗಾಯತ ಪಂಚಮಸಾಲಿ ಮಠದ ಬಸವ ಜಯ ಮೃತ್ಯುಂಜಯ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಮಹಿಳೆಯರು ಪೂರ್ಣ ಕುಂಭ ಹೊತ್ತು ಪುಷ್ಪಾರ್ಪಣೆ ಮೂಲಕ ಶ್ರೀಗಳನ್ನು ವೇದಿಕೆಗೆ ಬರಮಾಡಿಕೊಂಡರು.
ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರೀಟಿಷರ ವಿರುದ್ದ ಹೋರಾಡಲು ಲಿಂಗಾಯತ ಸಮಾಜದವರು ಸಹಾಯ ಸಹಕಾರ ಮಾಡುವ ಮೂಲಕ ಸಂಘಟನೆಗಳನ್ನು ಕಟ್ಟಿದವರಾಗಿದ್ದಾರೆ ಈಗಲೂ ಸಹ ನಾವು ಲಿಂಗಾಯತರು ಮತ್ತು ಒಳ ಪಂಗಡದವರು ಸಂಘಟಿತರಾಗ ಬೇಕಾಗಿದೆ ಎಂದರು

ನಂತರ ಸಂಘದ ಸದಸ್ಯರುಗಳಿಗೆ ಪ್ರಮಾಣ ಪತ್ರ ಮತ್ತು ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಜುನಾಥ ಸ್ವಾಮಿಜಿ ಮಾತನಾಡಿ ಒಕ್ಕಲಿಗರು ಮಣ್ಣನ್ನು ನಂಬಿ ಮಣ್ಣಿನಲ್ಲೆ ಪರಮಾತ್ಮನನ್ನು ಕಂಡು ಇಡಿ ಮಾನವ ಪಶು ಪಕ್ಷಿಗಳಿಗೆ ಆಹಾರ ನೀಡುವ ಸಮಾಜ ಒಕ್ಕಲಿಗ ಸಮಾಜ ಈ ಸಮಾಜಕ್ಕೆ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನ್ಯಾಯ ಒದಗಿ ಬರಬೇಕಾಗಿದೆ ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷ ನಿಂಗಪ್ಪ ಪೀರೊಜ, ವಿಜಯ ರವದಿ, ಚಂದ್ರಶೇಖರ ಪಾಟೀಲ, ರಾಜು ಮುನ್ನೋಳ್ಳಿ, ಚಿದು ಬಸ್ತವಾಡೆ, ಸೋಮನಾಥ ಪರಕನಟ್ಟಿ, ಪ್ರಕಾಶ ಪಾಟೀಲ, ಜ್ಯೋತಿಬಾ ದುಪ್ಪಟ್ಟಿ, ಶಿವಾನಂದ ಪಟ್ಟಣಶೇಟ್ಟಿ, ರವೀಂದ್ರ ಪರಕನಟ್ಟಿ ಹಾಗೂ ಸಂಘದ ಸದಸ್ಯರು ,ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!