Dharwad

ಚಕ್ರವರ್ತಿ ಸೂಲಿಬೆಲೆ ಸವಾಲ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕುವಂತೆ ಆಹ್ವಾನ

Share

ಎರಡು ದಿನಗಳಿಂದ ನನ್ನ ಮೇಲೆ ಎಫ‌ಐಆರ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಕಾರ್ ಮೇಲೆ ನಿಂತು ಮಾತಾಡ್ತಿರುವುದು ನಾನೆ, ಪೊಲೀಸರು FIR ಹಾಕುವಂತಿದ್ದರೆ ಜೀಪ್ ಮೇಲೆ ನಿಂತುಕ್ಕೊಂಡಿದ್ದೆನೆ ಹಾಕು ಬಾ ಎಂದ ರಾಜ್ಯದ ಗೃಹ ಸಚಿವರಿಗೆ ಚಕ್ರವರ್ತಿ ಸೂಲಿಬೆಲೆಯವರು ಸವಾಲ್ ಹಾಕಿದ್ದಾರೆ.‌

ಧಾರವಾಡದಲ್ಲಿ ನಡೆದ ತಿರಂಗಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಚಕ್ರವರ್ತಿ ಸೂಲಿಬೆಲೆ ಅವರು, ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತಾಡುತ್ತಾ, ಬೆಂಗಳೂರಲ್ಲಿ ಇವತ್ತು 4000 ಜನ ಸೇರಿ ತಿರಂಗಾ ರ್ಯಾಿಲಿ ಮಾಡಬೇಕಿತ್ತು, ಆದರೆ ಎರಡು ದಿನ ಮುಂಚೆ ಬೆಂಗಳೂರಿನ ಡಿಸಿಪಿ ಒಂದು ಲೆಟರ್ ಕೊಡ್ತಾರೆ. ನಾವು ತಿರಂಗಾ ರ್ಯಾಲಿಯನ್ನು ರಿಜೆಕ್ಟ್ ಮಾಡ್ತಿವಿ ಎಂದು. ತಿರಂಗಾ ರ್ಯಾಲಿಗೆ ಯಾಕೆ ಅನುಮತಿ ಇಲ್ಲ ಎಂದು ಕೇಳಿದ್ದೇನೆ. ನಿಮಗೆ ರಕ್ಷಣೆ ಕೊಡಲು ಮೆನ್ ಗಳಿಲ್ಲ ಎಂದು ಹೇಳ್ತಾರೆ. ಮೆನ್ ಗಳಿಲ್ಲಾ ಅಂದ್ರೆ ಎನ್ ಅರ್ಥ ನಮ್ಮ‌ ಯುವ ಬ್ರಿಗೇಡ್ ನಲ್ಲಿ ಯುವಕರು ಇದ್ದಾರೆ. ನಾವು ರಕ್ಷಣೆ ಕೊಡ್ತಿವಿ ಬನ್ನಿ, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ. ನೀವು ಬೆಂಗಳೂರಲ್ಲಿ ತಿರಂಗಾ ರ್ಯಾಲಿ ತಡೆ ಹಿಡಿಯಬಹುದು. ನಾವು ರಾಜ್ಯದ ಮೂಲೆ‌ ಮೂಲೆಯಲ್ಲಿ ತಿರಂಗಾ ಯಾತ್ರೆ ಮಾಡ್ತೀವಿ. ಹೇಗೆ ತಡಿಹಿಡಿಯುತ್ತಿರಿ ನೋಡೋಣ ಎಂದು ಸೂಲಿಬೆಲೆ ಸವಾಲ್ ಹಾಕಿದರು.. ಧಾರವಾಡದಲ್ಲಿ ವಿಜಯಿಭವ ಎಂದು ತಿರಂಗಯಾತ್ರೆ ಮಾಡಿದ್ದೇವೆ. ವಿಜಯಿಭವ ಅಂದ್ರೆ ಗೆಲ್ಲಲಿ ಎಂದರ್ಥ, ಕಳೆದ ಒಂದು ತಿಂಗಳಿಂದ ಜೆಂಜಿಗಳು ದೇಶದ ವಿರೋಧಿಗಳಾಗಿದ್ದಾರೆ ಎಂದು ಬಿಂಬಿಸಿದ್ದಾರೆ. ಜೆಂಜಿ ಪೀಳಿಗೆ ಭಾರತದ ಹೊಸ ಪೀಳಿಗೆಯೂ ಭಾರತದ ಪರವಾಗಿದೆ ಎಂದು ಗೊತ್ತಾಗಿದೆ.‌ಯಾರು ಜೆಂಜಿ ಪೀಳಿಗೆ ಕಲ್ಲು ಹೊಡಿಯೋಕೆ ಹುಟ್ಟಿಲ್ಲ, ಸಂಸತ್ತಿಗೆ ಬೆಂಕಿ ಹಚ್ಚಲಿಕ್ಕೆ‌ ಹುಟ್ಟಿಲ್ಲ,ದೇಶದ ಗೌರವನ್ನ ಮುಗಿಲೆತ್ತರಕ್ಕೆ ಒಯ್ಯಲು ಹುಟ್ಟಿಕ್ಕೊಂಡಿದ್ದಾರೆ. ಇವತ್ತು ಧಾರವಾಡದ ಯುವಕರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೆನೆ, ನೀವು ರೀಲ್ ಮಾಡುವವರಿಗೆ ನನ್ನ ಕೈಯಲ್ಲಿ ತಿರಂಗಾ ಇದೆ ನನ್ನನ್ನ ರೀಲ್ ಮಾಡು ಎಂದು ಹೇಳುವ ಯುವಕರಾಗಿದ್ದಿರಿ, ಸಿಬ್ಬಂದಿಗಳು ಇಲ್ಲ ಎಂದು ಪೊಲೀಸ್ ಇಲಾಖೆ ಹೇಳುತ್ತೆ. ದೆಹಲಿಯಲ್ಲಿ ಗುಂಡಾಗಳನ್ನ ಕರೆದುಕೊಂಡು ಬಂದು ಸಂಸತ್ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಿದ್ದಾರೆ. ಭಾರತ ದೇಶಕ್ಕೆ ಜೆಂಜಿ ತರುಣರು ಒಳ್ಳೆಯ ಕೆಲಸ ಮಾಡುತ್ತಾರೆ. ರಾಜ್ಯದ ಗೃಹ ಸಚಿವರಿಗೆ ನೀವು ರಸ್ತೆಯಲ್ಲಿ ನಿಂತು ಕಪಾಳಕ್ಕೆ ಹೊಡೆದಂಗೆ ಆಯ್ತು. ನನಗೆ ಹಾಲು ಕುಡದಷ್ಟು ಸಂತೋಷವಾಯ್ತು. ದೆಹಲಿಯಲ್ಲಿ ಯಾಕೆ ಪ್ರತಿಭಟನೆ ಪರೀಕ್ಷೆ ಚೆನ್ನಾಗಿ ಯಾಗಬೇಕು. ಕರ್ನಾಟಕ ಪರೀಕ್ಷೆ ಲೀಕ್ ಆಯಿತು ಯಾರು ಮಾತನಾಡಲಿಲ್ಲ, ಜಾರ್ಖಂಡ್ ನಲ್ಲಿ ಲೀಕ್ ಆಯ್ತು ಅಲ್ಲಿ ಯಾರು ಮಾತನಾಡಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.‌

Tags:

error: Content is protected !!