ಬೆಳಗಾವಿಯ ಪ್ರತಿಷ್ಠಿತ ಕೆಎಲ್ಇ ವಿಶ್ವವಿದ್ಯಾಲಯದ ಆವರಣದಲ್ಲಿರುವ ಶಿವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿದವು. ಈ ದಿನದ ವಿಶೇಷ ಆಕರ್ಷಣೆಯಾಗಿ ದೇವರಿಗೆ ನಯನಮನೋಹರವಾದ ಸೇಬು ಹಣ್ಣಿನ ಅಲಂಕಾರವನ್ನು ಮಾಡಲಾಗಿತ್ತು.

ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ಸುಂದರ ಆವರಣದಲ್ಲಿ ಕಂಗೊಳಿಸುತ್ತಿರುವ ಶಿವಾಲಯದಲ್ಲಿ ಪವಿತ್ರ ಶ್ರಾವಣ ಮಾಸದ ಕಡೇ ಸೋಮವಾರದ ಅಂಗವಾಗಿ ದೇವರಿಗೆ ವಿಶೇಷ ಮಹಾ ರುದ್ರಾಭಿಷೇಕ ಹಾಗೂ ಅಷ್ಟೋತ್ತರ ಪಠಣದೊಂದಿಗೆ ವಿಶಿಷ್ಟ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ದಿನದ ವಿಶೇಷ ಆಕರ್ಷಣೆಯಾಗಿ ದೇವರಿಗೆ ನಯನಮನೋಹರವಾದ ಸೇಬು ಹಣ್ಣಿನ ಅಲಂಕಾರ ಸೇವೆಯನ್ನು ಕಲ್ಪಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು. ಶಿವಾಲಯ ಕಮಿಟಿ ಅಧ್ಯಕ್ಷರಾದ ಮುತ್ತು, ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಶ್ವನಾಥ್ ಪಟ್ಟಣಶೆಟ್ಟಿ ಹಾಗೂ ಸಂಸ್ಥೆಯ ಎಲ್ಲಾ ಆಡಳಿತಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹಾಶಿವನ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಶಿವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಶಂಕ್ರಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಇಡೀ ಆವರಣದಲ್ಲಿ ದಿವ್ಯ ಹಾಗೂ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ಇದರ ಮುಂದುವರಿದ ಭಾಗವಾಗಿ ಇಂದು ಸಂಜೆ ವೈದ್ಯಕೀಯ ವಿದ್ಯಾರ್ಥಿಗಳಿಂದ ‘ಚಿಂತನ ಸಂಧ್ಯಾ’ ವಿಶೇಷ ಭಜನಾ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಲಿದೆ.
