Chikkodi

ಶಿಕ್ಷಕರ ದಿನಾಚರಣೆ ನಿಮಿತ್ತ ಚಿಕ್ಕೋಡಿಯಲ್ಲಿ ಬೃಹತ್ ರಕ್ತದಾನ ಶಿಬಿರ: 1,000ಕ್ಕೂ ಹೆಚ್ಚು ದಾನಿಗಳಿಂದ ರಕ್ತದಾನ ನಿರೀಕ್ಷೆ

Share

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ಆದೇಶದ ಮೇರೆಗೆ, ಪಟ್ಟಣದ ಡಯಟ್ ಸಭಾಭವನದಲ್ಲಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಈ ರಕ್ತದಾನ ಶಿಬಿರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು, ಗ್ರಾಮ ಪಂಚಾಯತಿ ನೌಕರರು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಶಿಕ್ಷಕರ ಸಂಘಟನಾ ಕಾರ್ಯದರ್ಶಿ ಎನ್. ಜಿ. ಪಾಟೀಲ ಹಾಗೂ ಅಕ್ಷರ ದಾಸೋಹದ ತಾಲೂಕಾ ಅಧಿಕಾರಿ ಹಾಗೂ ರಕ್ತದಾನ ಶಿಬಿರದ ನೋಡಲ್ ಅಧಿಕಾರಿ ಎಮ್. ಟಿ. ಜನಗೌಡ, ಸಮಾಜಮುಖಿ ಕಳಕಳಿಯೊಂದಿಗೆ ವಿವಿಧ ಇಲಾಖೆಗಳು ಕೈಜೋಡಿಸಿ ಈ ಶಿಬಿರವನ್ನು ಆಯೋಜಿಸಿವೆ. ಶಿಬಿರದಲ್ಲಿ 1,000ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡುವ ನಿರೀಕ್ಷೆಯಿದ್ದು, ಜೀವದಾನ ಮಾಡುವ ಪ್ರತಿಯೊಬ್ಬ ದಾನಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ‌ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಂ. ಪಿ. ಜನಗೌಡ, ಅಪ್ಪಾಸಾಹೇಬ ಕೋಟಿವಾಲೆ, ಆರ್. ಬಿ. ಜುಗುಳೆ, ಮಹೇಶ ಕಟ್ಟಿಮನಿ, ಆರ್. ಕೆ. ಕಾಂಬಳೆ, ಎ. ಡಿ. ಮಜಲಟ್ಟಿ, ಡಿ. ಎಚ್. ಕಾಂಬಳೆ, ವಿಶ್ವನಾಥ ಧುಮಾಳ, ಮಹಾವೀರ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:

error: Content is protected !!