Hukkeri

ಹುಕ್ಕೇರಿ : ಮಣ್ಣಿನ ಪ್ರತಿ ಕಣದಲ್ಲಿ ಶಿವನನ್ನು ಕಾಣಬಹುದು – ವಿದ್ಯಾ ನರಸಿಂಹ ಸ್ವಾಮಿಜಿ.

Share

ಮಣ್ಣಿನ ಪ್ರತಿ ಕಣದಲ್ಲೂ ಶಿವನನ್ನು ಕಾಣ ಬಹುದು ಎಂದು ಸಂಕೇಶ್ವರ ಶಂಕರಲಿಂಗ ಮಠದ ಶ್ರೀಮದ ಜಗದ್ಗುರು ಶಂಕರಾಚಾರ್ಯ ಅಭಿನವ ವಿದ್ಯಾ ನರಸಿಂಹ ಭಾರತಿ ಸ್ವಾಮಿಗಳು ಹೇಳಿದರು.

ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಹಿರಣ್ಯಕೇಶಿ ಹವ್ಯಾಸಿ ಈಜುಗಾರರು ಒಂದು ತಿಂಗಳು ಕಾಲ ಶಂಕರಲಿಂಗ ಮಠದ ಅಶ್ವಥ್ ಮರದ ಕೇಳಗೆ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಈಶ್ವರ ಲಿಂಗಕ್ಕೆ ವಿಷೇಶ ಅಭಿಷೇಕ ನೆರವೇರಿಸುವ ಮೂಲಕ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ವಾಮನ ಪುರಾಣಿಕ ನದಿ ದಡದಲ್ಲಿಯ ಅಶ್ವಥ್ ಮರದ ನೇರಳು ನದಿಯಲ್ಲಿ ಬಿಳುವ ಅಪರೂಪದ ಸ್ಥಳ ಇದಾಗಿದ್ದು ಇಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹಿರಿಯ ಈಜುಗಾರರ ಸಂಘದ ಸದಸ್ಯರು ಕಳೆದ ನಾಲ್ಕು ವರ್ಷದಿಂದ ವಿಷೇಶ ಪೂಜಾ ಅಭಿಷೇಕ ನೆರವೇರಿಸಿ ಸಾರ್ವಜನಿಕರಿಗೆ ಮಹಾಪ್ರಸಾದ ನೀಡುತ್ತಾ ಬಂದಿದ್ದಾರೆ ಎಂದರು

ಬೆಳಗಿನ ಜಾವ ನದಿಯಲ್ಲಿ ಸ್ನಾನ ಮಾಡಿ ಸೂರ್ಯನಿಗೆ ನಮಸ್ಕರಿಸಿ ಮಡಿಯಿಂದ ಕುಟುಂಬ ಸಮೇತ ಶಿವನಿಗೆ ಅಭಿಷೇಕ ಮಾಡಿದ ನಂತರ ಜಗದ್ಗುರುಗಳ ದರ್ಶನ ಪಡೆದು ಮಹಾ ಪ್ರಸಾದ ಪಡೆದರು.
ನಂತರ ಮಾತನಾಡಿದ ವಿದ್ಯಾ ಭಾರತಿ ನರಸಿಂಹ ಸ್ವಾಮೀಜಿ ಮಾತನಾಡಿ 8 ನೇ ಶತಮಾನದಲ್ಲಿ ಶಂಕರಾಚಾರ್ಯರು ಪ್ರತಿಷ್ಟಾಪಿದ ಶಂಕರಲಿಂಗ ಮಠದಲ್ಲಿ ಅಶ್ವಥ್ ಮರ ಮತ್ತು ಅಲ್ಲಿಯ ಶಿವ ಲಿಂಗದ ಮಹತ್ವ ಅಪಾರವಾಗಿದೆ, ಶ್ರಾವಣ ಮಾಸದಲ್ಲಿ ಮಣ್ಣಿನಿಂದ ಪ್ರತಷ್ಠಾಪಿಸಿದ ಶಿವನಿಗೆ ವಿಷೇಶ ಪೂಜೆ ನೇರವೆರಿಸಲಾಗುತ್ತದೆ ಎಂದರು

ಈ ಸಂದರ್ಬದಲ್ಲಿ ಈಜುಗಾರರ ಸಂಘದ ಸದಸ್ಯರಾದ ಅಶೋಕ ಮಾಸ್ತಿಹೋಳಿಮಠ, ಶಿವಾನಂದ ಪಾಟೀಲ, ಸುಹಾಸ ಕುಲಕರ್ಣಿ, ರಾಜು ಶಿಂದೆ, ಚಿದು ಹಿರೇಮಠ,ಶಿವಾನಂದ ಯಶವಂತ ,ನೀತಿನ ನಾಡಗೌಡಾ, ಪುಷ್ಪರಾಜ ಮಾನೆ, ದೇವದಾಸ ಭೋಸಲೆ,ಯೋಗೇಶ ಬೀಡೆ, ಪ್ರಕಾಶ ಭೋಪಳೆ, ಮಲ್ಲಿಕಾರ್ಜುನ ನಿಂಗನೂರೆ ಮೊದಲಾದವರು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!