ಹುಟ್ಟು ಅಂಧನಾದರೂ ಛಲಬಿಡದೆ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ನಂದಗಡದ ಸಂತೋಷ ನೀಲಜಕರ್ ಅವರ ನೆರವಿಗೆ ನಮ್ಮ ‘ಇನ್ ನ್ಯೂಸ್’ ಧ್ವನಿಯಾಗಿತ್ತು. ನಮ್ಮ ವರದಿಗೆ ಸ್ಪಂದಿಸಿದ ನಂದಗಡ ಗ್ರಾಮ ಪಂಚಾಯಿತಿ ಪಿಡಿಒ ಸಾಗರ ಕುಮಾರ್ ಬಿರಾದಾರ ಅವರು ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ವಿತರಿಸಿ ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ.

ಹುಟ್ಟಿನಿಂದಲೂ ಅಂಧತ್ವವಿದ್ದರೂ ಛಲಬಿಡದೆ ಪಿಯುಸಿ ಪೂರೈಸಿ ಉನ್ನತ ಶಿಕ್ಷಣ ಪಡೆಯಲು ಮುಂದಾಗಿರುವ ನಂದಗಡದ ಯುವಕ ಸಂತೋಷ ಕೃಷ್ಣಾ ನಿಲಜಕರ್ ಅವರ ಬೇಡಿಕೆಗೆ ‘ಇನ್ ನ್ಯೂಸ್’ ಚಾನೆಲ್ ಸ್ಪಂದಿಸಿ ವಿಶೇಷ ವರದಿ ಪ್ರಸಾರ ಮಾಡಿತ್ತು. ವರದಿಯ ಪ್ರಭಾವದಿಂದ ಎಚ್ಚೆತ್ತ ನಂದಗಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಗರ ಕುಮಾರ್ ಬಿರಾದಾರ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು, ಸುಮಾರು 50 ಸಾವಿರ ರೂ. ಬೆಲೆಬಾಳುವ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಿ ವಿತರಿಸುವ ಮೂಲಕ ಅಂಧ ಯುವಕನ ಶೈಕ್ಷಣಿಕ ಕನಸಿಗೆ ನೆರವಾಗಿದ್ದಾರೆ. ‘ಇನ್ ನ್ಯೂಸ್’ ವರದಿಯ ಈ ವಿಶೇಷ ಇಂಪ್ಯಾಕ್ಟ್‌ನಿಂದಾಗಿ ವಿದ್ಯಾರ್ಥಿಗೆ ದೊಡ್ಡ ಸಹಾಯ ಲಭಿಸಿದಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
