Belagavi

ಅ.3 ಮತ್ತು 4 ರಂದು ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್ ಸೀಜನ್-04; ಸಚಿವ ಸತೀಶ್ ಜಾರಕಿಹೊಳಿ. ಒಟ್ಟು 6.5 ಲಕ್ಷ ರೂ. ನಗದು ಬಹುಮಾನ ಘೋಷಣೆ; ಇಮ್ರಾನ್ ತಪಕೀರ್

Share

ಪ್ರತಿ ವರ್ಷದಂತೆ ಈ ಬಾರಿಯೂ ನಾಲ್ಕನೇ ಬಾರಿಗೆ ‘ಸತೀಶ್ ಅಣ್ಣಾ ಚೆಸ್ ಟೂರ್ನಾಮೆಂಟ್’ ಆಯೋಜಿಸಲಾಗುತ್ತಿದ್ದು, ಅಕ್ಟೋಬರ್ 3 ಮತ್ತು 4ರಂದು ನಗರದ ಮರಾಠಾ ಮಂದಿರದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶನಿವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಟೂರ್ನಾಮೆಂಟ್‌ಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಚೆಸ್ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದು ಹಾಗೂ ಪ್ರತಿಭಾವಂತ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಈ ಪಂದ್ಯಾವಳಿ ನಡೆಸಲಾಗುತ್ತಿದೆ ಎಂದರು.
ಚೆಸ್ ಕ್ರೀಡೆಯ ಬಗ್ಗೆ ಯುವಜನರಲ್ಲಿ ಆಸಕ್ತಿ ಹೆಚ್ಚಿಸುವುದು ಹಾಗೂ ಸ್ಥಳೀಯ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರೊಂದಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವುದು ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ. ಜಿಲ್ಲೆಯ ಕ್ರೀಡಾಪಟುಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು. byte

ಪಂದ್ಯಾವಳಿಯ ಕುರಿತು ಮಾತನಾಡಿದ ಇಮ್ರಾನ್ ತಪಕೀರ್, ‘ಸತೀಶ್ ಅಣ್ಣಾ ಜಾರಕಿಹೊಳಿ ಚೆಸ್ ಟೂರ್ನಾಮೆಂಟ್’ ಅನ್ನು ಕಳೆದ ಮೂರು ಬಾರಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಬಾರಿಯೂ ಅದೇ ಉತ್ಸಾಹದಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ವಿಜೇತ ಕ್ರೀಡಾಪಟುಗಳಿಗೆ ಒಟ್ಟು 6.50 ಲಕ್ಷ ಮೌಲ್ಯದ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್‌ಸಿ ಉಪಾಧ್ಯಕ್ಷ ವಿಕಿ ಸಿಂಗ್, ಮತ್ತೊಬ್ಬ ಉಪಾಧ್ಯಕ್ಷ ಅಕ್ಬರ್ ಸಡೇಕರ್, ಜಾವೀದ್ ಖಾನಾಪುರಿ, ಬೆಳಗಾವಿ ಭಾಗದ ನೃತ್ಯ ಹಾಗೂ ಚೆಸ್ ಪೋಷಕ ಪ್ರಶಾಂತ್ ಅನ್ವೇಕರ್, ಅಲ್ಲಾಭಕ್ಷಿ ನಾಮದಾರ್, ಶಿವರಾಜ ಸುತಾರ, ಜೈದ್ ವಾಟಮೂರಿ, ದೀಕ್ಷಾ ಪೂಜಾರಿ, ತಬುಸಮ್ ಮುಲ್ಲಾ, ನದೀಮ್ ಸಿದ್ದಿಕಿ, ಶಾಹನವಾಜ್ ಕಿಲ್ಲೇದಾರ್, ರೋಹಿಣಿ ಬಾಬಸೇಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!