ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳದ ಕಾಣಿಕೆ ಹುಂಡಿಯನ್ನು ಅಧಿಕಾರಿಗಳ ಸಮುಖದಲ್ಲಿ ತೆರವುಗೊಳಿಸಿ ಎಣಿಕೆ ಕಾರ್ಯ ನಡೆಸಲಾಯಿತು. ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಮಾರ್ಗದರ್ಶನದಲ್ಲಿ ರಚನೆಯಾಗಿದ್ದ ವಿಶೇಷ ಸಮಿತಿಯು ಈ ಹಣವನ್ನು ಎಣಿಕೆ ಮಾಡಿ, ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.
ನಂದಗಡದ ರಾಯಣ್ಣ ಸಮಾಧಿ ಸ್ಥಳದಲ್ಲಿ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ನೀಡಿದ್ದ ಹಣವನ್ನು ಕಂದಾಯ ನಿರೀಕ್ಷಕ ಠಕೇಕರ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಬಸವರಾಜ ಅವರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ನೋಟು ಮತ್ತು ನಾಣ್ಯಗಳನ್ನು ಪ್ರತ್ಯೇಕಿಸಿ ಎಣಿಕೆ ಮಾಡಿದಾಗ ಒಟ್ಟು 1,46,925 ರೂಪಾಯಿ ಸಂಗ್ರಹವಾಗಿರುವುದು ತಿಳಿದುಬಂದಿದೆ. ಈ ಎಣಿಕೆ ಕಾರ್ಯದಲ್ಲಿ ಗ್ರಾಮ ಆಡಳಿತಾಧಿಕಾರಿ ಮಹೇಶ್ ಬುರುಡ, ಜಾವೇದ್ ಖಾನಜಾದೆ, ವಿನಾಯಕ ಮಡಿವಾಳಕರ, ಎಮ್.ಬಿ. ಮನಗೊಳ್ಳಿ, ಕಿರಣ ಚೌವ್ಹಾಣ್, ಅನುರಾಧಾ ನಾಯಿಕ, ಶಕುಂತಲಾ ವಿರೇಶ ಘಂಟಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

