Dharwad

ಧಾರವಾಡ: ಗಾಮನಗಟ್ಟಿಯಲ್ಲಿ ಸಡಗರದಿಂದ ಆಚರಿಸಿದ ಈದ್ ಮಿಲಾದ್ ಹಬ್ಬ

Share

ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದಲ್ಲಿ ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುವ ಅತ್ಯಂತ ಪವಿತ್ರವಾದ ಈದ್ ಮಿಲಾದ್ ಹಬ್ಬದ ಸಂಭ್ರಮ ಮನೆ ಮಾಡಿದೆ.

ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರೆಲ್ಲರೂ ಸೇರಿಕೊಂಡು ಗ್ರಾಮದ ಬಸ್ ನಿಲ್ದಾಣದಿಂದ ಹಜರತ್ ಮಹ್ಮದ್ ಪೈಗಂಬರ್ ಪರ ಘೋಷಣೆ ಕೂಗುತ್ತಾ ಮೆರವಣಿಗೆ ಪ್ರಾರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಈ ಮೆರವಣಿಗೆ ಗ್ರಾಮದ ಬಸ್ ನಿಲ್ದಾಣದ ಮಸೀದಿ ಬಳಿ ಮುಕ್ತಾಯಗೊಂಡಿತು. ಇನ್ನು ಮೆರವಣಿಗೆಯಲ್ಲಿ ಸಾಗುವ ಮಾರ್ಗಮಧ್ಯೆಗಳಲ್ಲಿ ಮುಸ್ಲಿಂ ಸಂಘ-ಸಂಸ್ಥೆಗಳು ಸೇರಿದಂತೆ ಯುವ ಸಮುದಾಯದ ಗುಂಪುಗಳಿಂದ ತಂಪು ಪಾನೀಯಗಳನ್ನು ನೀಡಿ ಪೈಗಂಬರ್ ಕೃಪೆಗೆ ಪಾತ್ರರಾದರು.

Tags:

error: Content is protected !!