Belagavi

ಬೆಳಗಾವಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಮಾದರಿ ಈದ್-ಎ-ಮಿಲಾದ್ ಮೆರವಣಿಗೆ

Share

ಬೆಳಗಾವಿಯಲ್ಲಿ ಬಾರಾ ಇಮಾಮ್ ಬಿ ಮಾಲಿ ಮೊಹಲ್ಲಾ ಜಮಾತ್ ಮತ್ತು ಸಿರತ್ ಕಮಿಟಿ ವತಿಯಿಂದ ಈದ್ ಎ ಮಿಲಾದ್ ಉನ್ನಬಿಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಜಿನ್ನಾ ಚೌಕ್‌ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡು ಸರ್ವಧರ್ಮ ಸೌಹಾರ್ದತೆಯ ಸಂದೇಶ ಸಾರಿದರು.

ಬೆಳಗಾವಿಯಲ್ಲಿ ಬಾರಾ ಇಮಾಮ್’ಬಿ ಮಾಲಿ ಮೊಹಲ್ಲಾ ಜಮಾತ್ ಮತ್ತು ಸಿರತ್ ಕಮೀಟಿಯ ವತಿಯಿಂದ ಬೆಳಗಾವಿಯಲ್ಲಿ ಸಡಗರ ಸಂಭ್ರಮದ ಈದ್ ಎ ಮಿಲಾದ್ ಉನ್ನಬಿಯನ್ನು ಆಚರಿಸಲಾಯಿತು. ಜಿನ್ನಾ ಚೌಕಿನಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ಉತ್ತರ ಶಾಸಕ ಆಸೀಫ್ ಸೇಠ್ , ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ಅಕ್ಬರ್ ಬಾಗವಾನ್, ವಿಕಾಸ್ ಕಲಘಟಗಿ, ರಣಜೀತ್ ಚವ್ಹಾಣ್ ಪಾಟೀಲ್, ವಿಜಯ್ ಬೊಂಗಾಳೆ, ಮೊಹ್ಮದ್ ರಸೂಲ್ ಪೀರಜಾದೆ, ದೀಪಕ್ ಗುಡಗನಟ್ಟಿ ಇನ್ನುಳಿದವರು ಉಪಸ್ಥಿತರಿದ್ಧರು.

ಮೌಲಾನಾ ಮುಫ್ತಿ ಮಂಜೂರ್ ಅವರು ಸರ್ವಧರ್ಮದ ಶಾಂತಿಯ ತೋಟವನ್ನು ಬೆಳಗಾವಿಯಲ್ಲಿ ಕಾಣಬಹುದಾಗಿದೆ. ಈದ್ ಎ ಮಿಲಾದ್ ಎಂದರೇ, ಹಬ್ಬದ ಮಹತ್ವ ಮತ್ತು ಅಲ್ಲಾಹುವಿನ ಜನ್ಮದ ಸಂದರ್ಭ ಶಾಂತಿ, ಸೌಹಾರ್ದತೆಯ ಸಂದೇಶವನ್ನು ವಿವರಿಸುತ್ತ ಹಿಂದೂ, ಮುಸ್ಲಿಂ, ಸಿಖ್ ಇಸಾಯಿ ಎಲ್ಲ ಬಾಂಧವರು ಒಂದೇ ವೇದಿಕೆಯ ಮೇಲೆ ಕುಳಿತು ಇಂದು ಬೆಳಗಾವಿಯಲ್ಲಿ ಈದ್ ಎ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ಅಲ್ಲದೇ ಯುವಜನರು ದೇವರ ಸಂದೇಶವನ್ನು ಅರಿತು ಅರ್ಥಪೂರ್ಣವಾಗಿ ಆಚರಿಸುವುದಾದರೇ, ವ್ಯಸನಗಳಿಂದ ಹೊರಬರಬೇಕೆಂದು ಕರೆ ನೀಡಿದರು.

ಬೆಳಗಾವಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್ ಮಾತನಾಡಿ, ಯಾರಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ಸಂಕಷ್ಟದಲ್ಲಿದ್ದರೆ ಅವರಿಗೆ ಸಹಾಯ ಮಾಡಬೇಕು, ಹಸಿವಿನಿಂದ ಇರುವವರಿಗೆ ಅನ್ನ ನೀಡಬೇಕು ಎಂದು ಕರೆ ನೀಡಿದರು. ಕೇವಲ ಮಸೀದಿಗಳಲ್ಲಿ ಮಾತ್ರವಲ್ಲದೆ, ಪ್ರತಿಯೊಬ್ಬರ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳಬೇಕು. ನಮ್ಮ ನಬಿ ಅವರು ತೋರಿಸಿದ ಮಾರ್ಗದಲ್ಲಿ, ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರುತ್ತಾ ನಾವೆಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ಹಿಂದೂ,ಮುಸ್ಲಿಂ, ಸಿಖ್, ಇಸಾಯಿ ಬಾಂಧವರು ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದು, ಎಲ್ಲ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಗಣೇಶೋತ್ಸವ ಮತ್ತು ಈದ್ ಎ ಮಿಲಾದ್ ಉನ್ನಬಿ ಒಂದೇ ಸಮಯ ಬಂದಾಗ ಈದ್ ಎ ಮಿಲಾದ್ ಉನ್ನಬಿ ಮೆರವಣಿಗೆಯನ್ನು ಮೂಂದೂಡಿ ಕಳೆದ 3 ವರ್ಷಗಳಿಂದ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ. ಈದ್ ಮಿಲಾದ್’ನ ಈ ವೇದಿಕೆ ಸರ್ವ ಧರ್ಮದ ಸಂಕೇತವಾಗಿದೆ ಎಂದರು. ಇದು ಸದಾಕಾಲ ಮುಂದುವರೆಯಲಿ ಎಂದು ಆಶಿಸಿದರು.

ಮಾಜಿ ಶಾಸಕ ಫಿರೋಜ್ ಸೇಠ್ ಅವರು ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ತಿಳಿಸಿದರು. ಅಲ್ಲದೇ, ಹಬ್ಬ ಹರಿದಿನಗಳ ಮಹತ್ವ, ಸುಖ ದುಃಖದ ಪ್ರಸಂಗಗಳನ್ನು ಅರಿತು ಆಚರಿಸಬೇಕು. ಮೊಹರಂ ವೇಳೆ ಡಾಲ್ಭಿ ಬಳಕೆ, ಗಾಯನ ನೃತ್ಯಗಳನ್ನು ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿದರು. ನಿಯಮ ಮೀರಿದರೇ, ಮುಂದಿನ ಬಾರಿ ಅದನ್ನ ತಡೆಯುವ ಕರ್ತವ್ಯ ನಮ್ಮದಾಗಲಿದೆ ಎಂದರು.

ಬೆಳಗಾವಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ರಣಜೀತ್ ಚವ್ಹಾಣ್ ಪಾಟೀಲ್ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ಹೇಳಿದಂತೆ ದೇಶದಲ್ಲೇ ಬೆಳಗಾವಿ ಒಂದು ವಿಶೇಷ ಪದ್ಧತಿಯ ನಗರವಾಗಿದೆ. ಇಸ್ಲಾಂ ಧರ್ಮದ ಬೋಧನೆಯಂತೆ ನಮ್ಮ ಕಣ್ಣು, ಬಾಯಿ, ಕೈ ಮತ್ತು ಕಾಲುಗಳಿಂದ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಅದೇ ರೀತಿ ನಮ್ಮ ವೈಚಾರಿಕತೆ ಮತ್ತು ಸೌಹಾರ್ದತೆಯನ್ನು ನಾವೆಲ್ಲರೂ ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ನಂತರ ಗಣ್ಯರಿಂದ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು. ಜಿನ್ನಾ ಚೌಕನಿಂದ ಪ್ರಾರಂಭವಾದ ಮೆರವಣಿಗೆಯೂ ಫೋರ್ಟ್ ರಸ್ತೆ, ಕೇಂದ್ರ ಬಸ್ ನಿಲ್ದಾಣ್, ಆರ್.ಟಿ.ಓ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಕಾಲೇಜ್ ರಸ್ತೆ ಮಾರ್ಗವಾಗಿ ಕ್ಯಾಂಪ್’ನ ಅಸಾದಖಾನ್ ದರ್ಗಾಹ್’ಗೆ ತಲುಪಿ ಕೊನೆಗೊಂಡಿತು.

Tags:

error: Content is protected !!