Dharwad

ಧಾರವಾಡದಲ್ಲಿ ಗೃಹ ಬಳಕೆ ಸಿಲಿಂಡರ್ ಸ್ಪೋಟ್, ಓರ್ವನಿಗೆ ಗಂಭೀರ ಗಾಯ….

Share

ಗೃಹ ಬಳಕೆ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ಓರ್ವರಿಗೆ ಸುಟ್ಟ ಗಂಭೀರ ಗಾಯವಾಗಿರುವ ಘಟನೆ ಧಾರವಾಡದ ಜನ್ನತನಗರದಲ್ಲಿ ನಡೆದಿದ್ದು, ಸ್ಪೋಟದ ತೀವ್ರತೆಗೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದಿದ್ದಾರೆ.

ಧಾರವಾಡ ಜನತ ಜನಗರದ ನಿವಾಸಿ ರಾಜೇಸಾಬ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ. ಇನ್ನೂ ಗ್ಯಾಸ್ ಸ್ಪೋಟದ ಸೌಂಡ್ ಜೋರಾಗಿದ್ದು, ಬೆಂಕಿ ಕೂಡಾ ಮನೆಯಿಂದಾಚ್ಚೆಗೆ ಬಂದಿದೆ.‌ಇದನ್ನು ನೋಡಿದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಾರೆ. ಸ್ಪೋಟದ ಬಳಿಕ ಸ್ಥಳೀಯರು ಕೂಡಲೇ ದೌಡಾಯಿಸಿ ಮನೆಯಲ್ಲಿದವರ ರಕ್ಷಣೆಗೆ ಮುಂದಾಗಿದ ರಾಜೇಸಾಬ್‌ನನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ರಾಜೇಸಾಬ್‌ನಿಗೆ ಗ್ಯಾಸ್ ಸ್ಪೋಟದಿಂದ ಮೈ ತುಂಬಾ ಸುಟ್ಟ ಗಾಯಗಳಾಗಿವೆ, ಸದ್ಯ ರಾಜೇಸಾಬನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸಿಲಿಂಡರ್ ಸ್ಪೋಟದಿಂದಾಗಿ ಮನೆಯಲ್ಲಿನ ಸಾಮಗ್ರಗಳು ಸೇರಿ ಗೋಡೆಗಳಿಗೂ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯ ಕುರಿತು ವರದಿಯಾಗಿಲ್ಲ. ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!