baglkote

ಬೀಳಗಿಯಲ್ಲಿ ಮೊರಂ ತುಂಬಿದ್ದ ಟಿಪ್ಪರ್ ಪಲ್ಟಿ; ತಪ್ಪಿದ ಭಾರಿ ಅನಾಹುತ!

Share

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದ ಮುಧೋಳ ರಸ್ತೆಯಲ್ಲಿ ಮೊರಂ (ಗರಸು) ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೇ ಭಾರಿ ಅನಾಹುತವೊಂದು ತಪ್ಪಿದೆ.

ಬೀಳಗಿ–ಮುಧೋಳ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಟಿಪ್ಪರ್ ಏಕಾಏಕಿ ಚಾಲಕನ ಹತೋಟಿ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಅಪಘಾತದ ತೀವ್ರತೆಗೆ ಟಿಪ್ಪರ್‌ನಲ್ಲಿದ್ದ ಮೊರಂ ರಸ್ತೆಪಾಲಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬೀಳಗಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ತಕ್ಷಣವೇ ಜೆಸಿಬಿ ಯಂತ್ರದ ಮೂಲಕ ಪಲ್ಟಿಯಾದ ಟಿಪ್ಪರ್ ಹಾಗೂ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Tags:

error: Content is protected !!