bellari

ಬಳ್ಳಾರಿ: ಬಿಟಿಪಿಎಸ್‌ನಲ್ಲಿ ಉದ್ಯೋಗ ಸಿಗದೆ ಮನನೊಂದು ವಿದ್ಯುತ್ ತಂತಿ ಹಿಡಿದು ವ್ಯಕ್ತಿ ಆತ್ಮಹತ್ಯೆ

Share

ಕುಡುತಿನಿಯಲ್ಲಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ
ಉದ್ಯೋಗ ಸಿಗದಿದ್ದಕ್ಕೆ ಚಂದ್ರಶೇಖರ (44) ಬಲಿ
ಜಮೀನು ನೀಡಿದರೂ ಸಿಗಲಿಲ್ಲ ಉದ್ಯೋಗ
ಬಿಟಿಪಿಎಸ್ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

ಬಳ್ಳಾರಿ ತಾಲೂಕಿನ ಕುಡುತಿನಿ ಪಟ್ಟಣದ ಇಂದಿರಾ ನಗರದಲ್ಲಿ ವ್ಯಕ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.

ಬಳ್ಳಾರಿ ತಾಲೂಕಿನ ಕುಡುತಿನಿ ಪಟ್ಟಣದ ಇಂದಿರಾ ನಗರದಲ್ಲಿ ಚಂದ್ರಶೇಖರ (44) ಎಂಬ ವ್ಯಕ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್) ಉದ್ಯೋಗ ನೀಡದ ಹಿನ್ನೆಲೆಯಲ್ಲಿ ಮನನೊಂದು ಅವರು ಈ ಹಂತಕ್ಕೆ ತಲುಪಿದ್ದಾರೆ ಎಂದು ಆರೋಪಿಸಲಾಗಿದೆ.2001ರಲ್ಲಿ ಬಿಟಿಪಿಎಸ್ ಸ್ಥಾಪನೆಯಾದ ಸಂದರ್ಭದಲ್ಲಿ ಚಂದ್ರಶೇಖರ ಅವರು ತಮ್ಮ 2.5 ಎಕರೆ ಜಮೀನು ನೀಡಿದ್ದರು. ಇತ್ತೀಚೆಗೆ ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಅವರಿಗೆ, ಬಿಟಿಪಿಎಸ್ ತರಬೇತಿ ನೀಡಿ ಕೆಲಸ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ತರಬೇತಿ ಮುಗಿದು ಏಳು ತಿಂಗಳು ಕಳೆದರೂ ಉದ್ಯೋಗ ನೀಡದಿರುವುದೇ ಅವರ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

ಪ್ರಸ್ತುತ ಕುಟುಂಬಸ್ಥರು ಹಾಗೂ ಸ್ಥಳೀಯರು ಚಂದ್ರಶೇಖರ ಅವರ ಮೃತದೇಹವನ್ನು ಬಿಟಿಪಿಎಸ್ ಸಂಸ್ಥೆಯ ಮುಂದೆ ಇಟ್ಟು ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಡುತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!