Hukkeri

ಹುಕ್ಕೇರಿ ರುದ್ರಮುನಿ ಆಶ್ರಮಕ್ಕೆ ನೂತನ ಸಾರಥಿ ಮಂಜುನಾಥ ಮಹಾರಾಜರು.

Share

ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ರುದ್ರಮುನಿ ಆಶ್ರಮಕ್ಕೆ ನೂತನ ಸಾರಥಿಯಾಗಿ ಮಂಜುನಾಥ ಮಹಾರಾಜರಿಗೆ ಪುರಪ್ರವೇಶ ನೀಡಲಾಯಿತು.

ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯಾ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಭಕ್ತರು ನೂತನ ಸಾರಥಿಯನ್ನು ಬರಮಾಡಿಕೊಂಡರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಮಲ್ಲಯ್ಯಾ ಮಹಾಸ್ವಾಮಿಗಳು ಅಪಾರ ಜ್ಞಾನ ಪಡೆದ ಮಂಜುನಾಥ ಮಹಾರಾಜರು ಕಳೆದ ಹತ್ತು ವರ್ಷಗಳಿಂದ ಮಲ್ಲಪ್ಪ ಮಹಾರಾಜರ ಆಶ್ರಮದಲ್ಲಿ ಇದ್ದು ಪಾದರಸದಂತೆ ಓಡಾಡಿ ಸಾಕಷ್ಟು ಸುಧಾರಣೆ ಮಾಡಿದ್ದಾರೆ , ಗೃಹಸ್ಥ ಹೊಂದಿದ ಯವಕ ಈಗ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು ವಾಸ್ತವ್ಯ ಮಾಡಿದ ಹುಲ್ಲೊಳಿ ಹಟ್ಟಿಯ ರುದ್ರಮುನಿ ಆಶ್ರಮದ ಅಧಿಪತಿ ಯಾಗಲಿದ್ದಾರೆ ಅವರನ್ನು ಎಲ್ಲ ಭಕ್ತರು ಒಪ್ಪಿಕೊಳ್ಳು ಬೇಕು ಎಂದರು


ವೇದಿಕೆ ಮೇಲೆ ನೂಲ ಸುರಗೀರಿಮಠದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಚಿಕ್ಕಾಲಗುಡ್ಡದ ಪ್ರಲ್ಹಾದಜಿ ಮಹಾರಾಜರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹುಕ್ಕೇರಿ, ಸಂಕೇಶ್ವರ, ಘಟಪ್ರಭಾ, ಗೋಕಾಕ ಭಾಗದ ಸಾವಿರಾರೂ ಜನ ಭಕ್ತ ಸಮೂಹ ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ

Tags:

error: Content is protected !!