ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿಯವರು ಹಾಗೂ ಅವರ ಅಭಿಮಾನಿ ಬಳಗ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಒಂದಿಲ್ಲೊಂದು ಕಾರ್ಯ ಚಟುವಟಿಗಳಿಂದ ಮನೆ ಮಾತಾಗಿದ್ದು, ಇಂದು ಕೂಡಾ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ರೈತನ ಬೆನ್ನೆಲುಬು ಎಂದೇ ಖ್ಯಾತಿ ಪಡೆದುಕೊಂಡಿರುವ ಎತ್ತು ಜತೆಗೆ ರೈತ ಓಟದ ಸ್ಪರ್ಧೆ ಆಯೋಜನೆ ಮಾಡಿ ಗ್ರಾಮೀಣ ಕ್ರೀಡೆ ಪ್ರತ್ಸಾಹಿಸಿದ್ದಾರೆ. ಅದರ ಚಿಕ್ಕ ಜಲಕ್ ಇಲ್ಲಿದೆ ನೋಡಿ…


ಧಾರವಾಡ ಮುಳಮುತ್ತಲ ಗ್ರಾಮದಲ್ಲಿಂದ ಕಣ್ಣು ಹಾಯಿಸಿದ ಕಡೆಯಲ್ಲ ಜನವೋ ಜನ
ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿಯವರಿಂದ ಎತ್ತಿನ ಜತೆ ರೈತನ ಓಟ ಸ್ಪರ್ಧೆ
ಮೊದಲ ಸ್ಥಾನಕ್ಕೆ 21ಸಾವಿರ, ಎರಡನೇ ಸ್ಥಾನಕ್ಕೆ 17ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 11 ಸಾವಿರ ಬಹುಮಾನ ಸೇರಿ ಒಟ್ಟು 9 ಸ್ಥಾನದವರೆಗೆ ಬಹುಮಾನ.

ಒಂದು ಕಡೆ ರೈತನ ಕೈಯಲ್ಲಿ ತನ್ನ ಹೋರಿ ಹಗ್ಗದೊಂದಿಗೆ ಓಟ್…ಮತ್ತೊಂದು ಕಡೆ ಎತ್ತಿನ ಜತೆ ರೈತನ ಓಟದ ಸ್ಪರ್ಧೆ ನೋಡಲು ಹರಿದು ಬಂದ ಜನಸಾಗರ….ಮಗದೊಂದು ಕಡೆ ಗೆದ್ದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡುತ್ತಿರುವ ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ..ಎಸ್ ಈ ಎಲ್ಲ ದೃಶ್ಯಗಳಿಗೆ ಇಂದು ಧಾರವಾಡ ತಾಲ್ಲೂಕಿನ ಮುಳಮುತ್ತಲ ಗ್ರಾಮ ಸಾಕ್ಷಿಯಾಗಿತ್ತು. ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ರೈತ ಸಮುದಾಯಕ್ಕೆ ಸ್ಪರ್ಧಾ ಮನರಂಜನೆ ಜತೆಗೆ ಭಾವನೆ ಬೆಳೆಸುವ ನಿಟ್ಟಿನಲ್ಲಿ ಇಂದು ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದ ವತಿಯಿಂದ ಹೋರಿ ಹಿಡಿದುಕೊಂಡು ರೈತ ಓಟ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಯಾದವಾಡ ಮುಳಮುತ್ತಲ ಸುಕ್ಷೇತ್ರ ಪರಮ ಪೂಜ್ಯ ಡಾ ಅನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮ ಜರುಗಿದ್ದು, ಸ್ವಾಮೀ ಹಾಗೂ ಮಂಜುನಾಥ ಮಕ್ಕಳಗೇರಿಯವರು ಹೋರಿ ಹಿಡಿದ ಓಡುವ ಸ್ಪರ್ಧೆಗೆ ಹೋರಿಗಳಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಮಂಜುನಾಥ ಮಕ್ಕಳಗೇರಿಯವರು, ನಮ್ಮ ಗ್ರಾಮೀಣ ಭಾಗದ ಶ್ರೇಷ್ಠ ಸಂಸ್ಕೃತಿ, ಜಾನಪದ ಕ್ರೀಡೆಗಳು ಹಾಗೂ ಗ್ರಾಮೀಣ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಹೋರಿ ಓಡಿಸುವ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಜನತೆಯಲ್ಲಿ ಕ್ರೀಡಾ ಸ್ಪೂರ್ತಿ ಹಾಗೂ ಒಗ್ಗಟ್ಟನ್ನು ಮೂಡಿಸಲು ಇಂತಹ ಸಾಹಸಮಯ ಪಂದ್ಯಾವಳಿಗಳು ಸಹಕಾರಿ. ರೈತರ ಮಕ್ಕಳು ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯಎಂದು ಹೇಳಿದರು.

ಇನ್ನೂ ಈ ಸ್ಪರ್ಧೆಯಲ್ಲಿ 12 ಕಿಲೋಮೀಟರ್ ಹೋರಿ ಹಿಡಿದು ಓಡುವ ಸ್ಪರ್ಧೆ ಇದಾಗಿದ್ದು, ಒದರಿಂದ -ಒಬ್ಬಂತ್ತು ಸ್ಥಾನದವರೆಗೆ ಬಹುಮಾನ ಇಡಲಾಗಿತ್ತು. ಈ ಸ್ಪರ್ಧೆಯು ಮುಳಮುತ್ತಲ ಗ್ರಾಮದಿಂದ ಪ್ರಾರಂಭವಾಗಿ ನರೇಂದ್ರ ರಸ್ತೆ, ಯಾದವಾಡ ಹೈಸ್ಕೂಲ್ ಮಾರ್ಗವಾಗಿ ಪುನಃ ಮುಳಮುತ್ತಲ ಗ್ರಾಮಕ್ಕೆ ತಲುಪಿತು. ಸುತ್ತಮುತ್ತಲ ನೂರಾರು ಹಳ್ಳಿಗಳಿಂದ ಬಂದಿದ್ದ ಬಲಿಷ್ಠ ಹೋರಿಗಳು ಹಾಗೂ ಸಾಹಸಿ ಯುವಕರು ರೋಮಾಂಚಕ ಪ್ರದರ್ಶನ ನೀಡಿದರು. ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಸಾವಿರಾರು ವೀಕ್ಷಕರು ಸಿಳ್ಳೆ, ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.

ಇನ್ನೂ ಈ ರೀತಿಯ ಸ್ಪರ್ಧೆಯ ಜಿಲ್ಲೆಯ ಇತಿಹಾಸದಲ್ಲೇ ಮೊದಲು ಬಾರಿಗೆ ಆಯೋಜನೆಗೊಂಡಿದ್ದು, ಧಾರವಾಡ ಸೇರಿ ಬೆಳಗಾವಿ ಹೊರ ಜಿಲ್ಲೆಗಳಿಂದಲ್ಲು ರೈತರು ತಮ್ಮ ಹೋರಿಗಳ ಜತೆಗೆ ಭಾಗವಹಿಸಿದರು. ಅಂತಿಮವಾಗಿ ಪ್ರಥಮ ಬಹುಮಾನ ಚಿಕ್ಕೋಡಿಯ ಶಿವಾರಾಜ ಪಾಲಾಗಿದ್ದು, ಎರಡನೇಯ ಬಹುಮಾನ ಕೆನಕೇರಿ ರಾಕೇಟ್ ಪಾಲಾಯಿತು. ಗೋಕನಕೊಪ್ಪದ ಬೆಳ್ಳಿ ಸಾಮ್ರಾಜ್ಯ ಲಕ್ಷ್ಯಾ ಜೋಡಿಯ ಗೆದ್ದು ಬಿಗಿತ್ತು. ಒಟ್ಟು ಒಂಬತ್ತು ಬಹುಮಾನಗಳನ್ನು ಇಡಲಾಗಿದ್ದು, ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಒಟ್ಟಿನಲ್ಲಿ ಮುಂಗಾರು ಮಳೆ ಕೈಕೊಟ್ಟು ಬೇಸರದಲ್ಲಿ ರೈತರ ಮುಖದಲ್ಲಿ ಈ ಸ್ಪರ್ಧೆ ಕೊಂಚ ಸಂತಸ ಮೂಡಿಸುವಲ್ಲಿ ಯಶಸ್ವಿಗಿರುವುದು ಸುಳ್ಳಲ್ಲ.
ಇನ್ ನ್ಯೂಸ್ ಮಂಜುನಾಥ ಡಿ ಧಾರವಾಡ
