ಅಗಷ್ಟ 15 ರಂದು ಎಲ್ಲ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕ ದ್ವಜಾರೋಹಣದಲ್ಲಿ ಕಡ್ಡಾಯವಾಗಿ ಭಾಗವಹಿಸ ಬೇಕು ಎಂದು ಹುಕ್ಕೇರಿ ತಾಲೂಕಾ ದಂಡಾಧಿಕಾರಿ ಬಲರಾಮ ಕಟ್ಟಿಮನಿ ಹೇಳಿದರು.
ಸ್ವಾತಂತ್ರೋತ್ಸವ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಗರದ ಗಣ್ಯರು ,ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದು ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಜರುಗಿಸಲು ತೀರ್ಮಾನಿಸಲಾಯಿತು.


ನಂತರ ಮಾತನಾಡಿದ ತಹಸಿಲ್ದಾರ ಬಲರಾಮ ಕಟ್ಟಿಮನಿ ಅಗಷ್ಟ 15 ರಂದು ಬೆಳಗಿನ ಜಾವ ತಮ್ಮ ಇಲಾಖಾ ಕಟ್ಟಡದ ಮೇಲೆ ದ್ವಜಾರೋಹನ ಜರುಗಿಸಿ 9 ಘಂಟೆಗೆ ನಗರದ ಎಸ್ ಕೆ ಹೈ ಸ್ಕೂಲ್ ಮೈದಾನದಲ್ಲಿ ಜರಗುವ ಸಾರ್ವಜನಿಕ ದ್ವಜಾರೋಹನದಲ್ಲಿ ಕಡ್ಡಾಯವಾಗಿ ತಮ್ಮ ಇಲಾಖಾ ಸಿಬ್ಬಂದಿಗಳೊಂದಿಗೆ ಭಾಗ ವಹಿಸಬೇಕು ಎಂದು ಕಟ್ಟು ನಿಟ್ಟಿನ ಆದೇಶ ಮಾಡಿದರು.
ಸರ್ಕಾರಿ ನೌಕರರ ಸಂಘದ ಹುಕ್ಕೇರಿ ಘಟಕದ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ ಮಾತನಾಡಿ ರಾಷ್ಟ್ರೀಯ ಹಬ್ಬಗಳಲ್ಲಿ ನಮ್ಮ ಸ್ವ ಇಚ್ಚೆಯಿಂದ ಭಾಗವಹಿಸ ಬೇಕು ಇದು ನಮ್ಮ ಸರಕಾರಿ ನೌಕರರ ಕರ್ತವ್ಯ ವಾಗಿದೆ ಕಾರಣ ಅಗಷ್ಟ 15 ರಂದು ದ್ವಜಾರೋಹನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ವಿಬೃಂಜನೆಯಿಂದ ಆಚರಿಸಲು ಸಹಕರಿಸ ಬೇಕು ಎಂದರು

ಈ ಸಂದರ್ಭದಲ್ಲಿ ನಗರದ ಗಣ್ಯರಾದ ಉದಯಕುಮಾರ ಹುಕ್ಕೇರಿ, ಪೋಲಿಸ್ ಇನ್ಸಪೆಕ್ಟರ ಶಿವಶಂಕರ ಗಣಾಚಾರಿ,ಗ್ರೇಡ ೨ ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ, ಉಪ ತಹಸಿಲ್ದಾರ ಅನಿತಾ ಏಶ್ಯಾಯಾಗೋಳ, ಬಸವರಾಜ ನಾಂದೂಡಕರ ವಿವಿಧ ಇಲಾಖಾ ಅಧಿಕಾರಿಗಳಾದ ಮಹಾದೇವ ಪಟಗುಂದಿ, ಬಿ ಇ ಓ ಪ್ರಭಾವತಿ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಗುರುಶಾಂತ ಪಾವಟೆ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಸಾರಾಪುರೆ, ಟ್ರೆಜರಿ ಸುಭಾಷ ಝಂಡೆನವರ, ಎಂ ಎಸ್ ಕಳ್ಳಿಮನಿ, ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಸೇರಿದಂತೆ ವಿವಿಧ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
ನಂತರ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಪ್ರತಿಜ್ಞಾ ವಿಧಿ ಭೊದಿಸಿದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
