ಹುಬ್ಬಳ್ಳಿಯಿಂದ ಕಾರಡಗಿ ಗ್ರಾಮಕ್ಕೆ ಹೊರಟಿದ್ದ ಸಾರಿಗೆ ಬಸ್ ಕುಬಿಹಾಳ ಗ್ರಾಮದ ಬಳಿ ಪಲ್ಟಿಯಾದ ಘಟನೆ ಇದೀಗ ನಡೆದಿದೆ.

ಹುಬ್ಬಳ್ಳಿಯಿಂದ ಕಾರಡಗಿ ಗ್ರಾಮಕ್ಕೆ ವಸ್ತಿ ಹೊರಟಿದ್ದ ಬಸ್ ಕುಂದಗೋಳ ತಾಲುಕೂ ಕುಬಿಹಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳದ ಬದಿಗೆ ಪಲ್ಟಿಯಾಗಿದೆ.
ಬಸ್ ಪಲ್ಟಿ ರಭಸಕ್ಕೆ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
