ಬೆಳಗಾವಿಯ ಗಣೇಶಪುರದ ನಿವಾಸಿಯೊಬ್ಬರಿಗೆ ಆನ್ಲೈನ್ನಲ್ಲಿ ಬಂದ ತಪ್ಪಾದ ವಸ್ತುವನ್ನು ವಾಪಸ್ ಮಾಡಲು ಹೋಗಿ ಸೈಬರ್ ವಂಚಕರ ಬಲೆಗೆ ಬಿದ್ದು ಲಕ್ಷ ರೂಪಾಯಿ ಕಳೆದುಕೊಂಡ ಭೀಕರ ಘಟನೆ ನಡೆದಿದೆ. ಕಸ್ಟಮರ್ ಕೇರ್ ಹೆಸರಿನಲ್ಲಿ ಬ್ಯಾಂಕ್ ವಿವರ ಪಡೆದು ಯುಪಿಐ ಮೂಲಕ ವಂಚಿಸಲಾಗಿದ್ದ ಹಣವನ್ನು ಸಿಇಎನ್ ಪೊಲೀಸರು ಯಶಸ್ವಿಯಾಗಿ ಫ್ರೀಜ್ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದ್ದಾರೆ.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬೆಳಗಾವಿ ಗಣೇಶಪುರದ ಗ್ರಾಹಕರು ಆನ್ಲೈನ್ನಲ್ಲಿ ಬುಕ್ ಮಾಡಿದ ವಸ್ತುವಿಗೆ ಬದಲಾಗಿ ಬೇರೆ ವಸ್ತು ಬಂದಿತ್ತು. ಅದನ್ನು ವಾಪಸ್ ಮಾಡಲು ಹೊರಟು ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾರೆ. ‘ರೀಫಂಡ್’ ನೆಪದಲ್ಲಿ ಅವರ ಬ್ಯಾಂಕ್ ಖಾತೆ ವಿವರ ಪಡೆದ ವಂಚಕರು, ಕೆಲವೇ ನಿಮಿಷಗಳಲ್ಲಿ ಯುಪಿಐ ಮೂಲಕ ಒಮ್ಮೆ 98 ಸಾವಿರ ರೂ.ಹಾಗೂ ಮತ್ತೊಮ್ಮೆ 2 ಸಾವಿರ ರೂ.ನಂತೆ ಹಣ ವಂಚನೆ ಮಾಡಿದ ಪ್ರಕರಣ ದಾಖಲಾಗಿ ಹಣ ಪ್ರೀಸ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.ವಂಚನೆ ಮಾಡಿದ ಹಣವನ್ನು ಸಿಇಎನ್ ಪೊಲೀಸರು ಪ್ರೀಜ್ ಮಾಡಿದ್ದಾರೆ. ವಂಚನೆಗೊಳಗಾದವರು ನ್ಯಾಯಾಲಯದ ಮೂಲಕ ಹಣ ಮರಳಿ ಪಡೆಯಬಹುದು ಎಂದರು.
