Kittur

ಕಿತ್ತೂರಿನಲ್ಲಿ ಅಭಿವೃದ್ಧಿ ಪರ್ವ: ಸುತಗಟ್ಟಿಯಲ್ಲಿ ಆರೋಗ್ಯ ಕೇಂದ್ರ, ನೇಸರಗಿಯಲ್ಲಿ ₹160 ಲಕ್ಷದ ಬ್ಯಾರೇಜ್ ಕಾಮಗಾರಿಗೆ ಚಾಲನೆ!

Share

ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ಸಿಕ್ಕಿದೆ. ಶಾಸಕ ಬಾಬಾಸಾಹೇಬ ಪಾಟೀಲ ಅವರ ನೇತೃತ್ವದಲ್ಲಿ ಸುತಗಟ್ಟಿ ಗ್ರಾಮದಲ್ಲಿ ‘ಆಯುಷ್ಮಾನ್ ಆರೋಗ್ಯ ಕೇಂದ್ರ’ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿದರೆ, ನೇಸರಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ₹160 ಲಕ್ಷ ವೆಚ್ಚದ ನೂತನ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಕಿತ್ತೂರು ಕ್ಷೇತ್ರದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಅದರ ಭಾಗವಾಗಿ ನೇಸರಗಿ ಮತ್ತು ಸುತಗಟ್ಟಿ ಗ್ರಾಮಗಳಲ್ಲಿ ಮಹತ್ವದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ನೇಸರಗಿ ಭಾಗದ ರೈತರ ಬಹುಕಾಲದ ಕನಸಾಗಿದ್ದ ಬ್ಯಾರೇಜ್ ನಿರ್ಮಾಣಕ್ಕೆ ₹160 ಲಕ್ಷ ಅನುದಾನ ಒದಗಿಸಲಾಗಿದ್ದು, ಈ ಯೋಜನೆ ಪೂರ್ಣಗೊಂಡಲ್ಲಿ ಸುತ್ತಮುತ್ತಲಿನ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗುವುದಲ್ಲದೆ ಅಂತರ್ಜಲ ಮಟ್ಟವೂ ಗಮನಾರ್ಹವಾಗಿ ವೃದ್ಧಿಸಲಿದೆ.

ಇನ್ನೊಂದೆಡೆ, ಸುತಗಟ್ಟಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ‘ಆಯುಷ್ಮಾನ್ ಆರೋಗ್ಯ ಕೇಂದ್ರ’ದಿಂದ ಸ್ಥಳೀಯ ಗ್ರಾಮಸ್ಥರಿಗೆ ಗುಣಮಟ್ಟದ ಹಾಗೂ ತುರ್ತು ಆರೋಗ್ಯ ಸೇವೆಗಳು ತಲುಪಲಿವೆ. ತಮ್ಮ ದಶಕಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಸುತಗಟ್ಟಿ ಹಾಗೂ ನೇಸರಗಿ ಭಾಗದ ಸಾರ್ವಜನಿಕರು ಮತ್ತು ರೈತ ಸಮುದಾಯ ಶಾಸಕ ಬಾಬಾಸಾಹೇಬ ಪಾಟೀಲ ಅವರ ಈ ಕಾರ್ಯಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿ, ಸ್ವಾಗತಿಸಿದ್ದಾರೆ.

Tags:

error: Content is protected !!