ಅದ್ಯಾಕೋ ಏನೋ ರೈತರಂದ್ರೆ ಸರ್ಕಾರ ಅಷ್ಟೇ ಅಲ್ಲ ಅಧಿಕಾರಿಗಳಿಗೂ ನಿರ್ಲಕ್ಷ್ಯ ಭಾವನೆ ಹೆಚ್ಚಾಗಿಯೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ಧಾರವಾಡದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಸರ್ಕಾರದ ಪರಿಹಾರ ಇಲ್ಲಿಇನ್ನೂ ಆ ರೈತ ಕುಟುಂಬಕ್ಕೆ ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿದಿದ್ದು, ಅನ್ಮದಾತರು ಜಿಲ್ಲಾಡಳಿತ ಈ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.


ಹೌದು….ಧಾರವಾಡ ತಾಲ್ಲೂಕಿನ ಕಬ್ಬೇನೂರು ಗ್ರಾಮದಲ್ಲಿನ ವೀರುಪಾಕ್ಷಪ್ಪ ರೈತ ತನ್ನ ಪತ್ನಿಯ ಮಂಗಳಸೂತ್ರ ಒತ್ತೆಯಾಗಿಟ್ಟು, ಈ ಬಾರಿ ಮುಂಗಾರು ಬಿತ್ತನೆ ಮಾಡಿದನ್ನು. ಆದರೆ ಸಕಾಲಕ್ಕೆ ಮಳೆಯಾಗದೇ ಮುಂಗಾರು ಬೆಳೆ ಒಣಗಿ ಹೋಗಿತ್ತು. ಇದರಿಂದ ಮನನೊಂದ ರೈತ ವೀರುಪಾಕ್ಷ್ಪ ಕಳೆದ ಜುಲೈ 3 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ರೈತ ವೀರುಪಾಕ್ಷಪ್ಪ ಆತ್ಮಹತ್ಯೆಯಾಗಿ ತಿಂಗಳು ಕಳೆದ್ರೂ ಡಿಸಿಗೆ ಮಾಹಿತಿ ಇಲ್ವಂತೆ. ಜುಲೈ 3 ರಂದು ರೈತ ಆತ್ಮಹತ್ಯೆ ಎಂದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜತೆಗೆ ಕಳೆದ ಮೂರು ದಿನಗಳ ಹಿಂದಷ್ಟೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿಯಲ್ಲಿ ರೈತ ನಾಗಪ್ಪ ಗೂಡದೂರು ಅನ್ನವವರು ಆತ್ಮಹತ್ಯೆಗೆ ಶರಣಾದ್ರೂ ಅವರುಗೂ ಕೂಡಾ ಪರಿಹಾರ ಸಿಕ್ಕಿಲ್ಲ. ಈ ರೀತಿಯ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯಕ್ಕೆ ಈಗ ರೈತ ಸಂಘನೆಗಳು ಸೇರಿದಂತೆ ಅನ್ನದಾತರು ಹಾಗೂ ಮನೆಯ ಯಜಮಾನರನ್ನು ಕಳೆದ ಕೊಂಡ ಕುಟುಂಬ ಹಿಡಿಶಾಪ ಹಾಕುತ್ತಿದ್ದಾರೆ.
