Uncategorized

ಧಾರವಾಡ ಹೈವೆಯಲ್ಲಿ ಸ್ಟೇರಿಂಗ್ ಲಾಕ್ ಆಗಿ ರಸ್ತೆ ಮಧ್ಯೆಯೇ ನಿಂತ ಗ್ಯಾಸ್ ಟ್ಯಾಂಕರ್, ಕೆಲಕಾಲ ಸಂಚಾರ ಅಸ್ತವ್ಯಸ್ತತೆ

Share

ಸ್ಟೇರಿಂಗ್ ಲಾಕ್ ಆದ ಪರಿಣಾಮ ಗ್ಯಾಸ್ ತುಂಬಿದ ಲಾರಿ ರಸ್ತೆ ಮಧ್ಯೆಯೇ ನಿಂತು ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಸಾಯಿ ಅರಣ್ಯ ಹೋಟೆಲ್ ಎದುರಿಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಸಂಭವಿಸಿದೆ.

ಬೆಳಗಾವಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಗ್ಯಾಸ್ ತುಂಬಿದ ಲಾರಿಯ ಸ್ಟೇರಿಂಗ್ ಲಾಕ್ ಆಗಿದ್ದರಿಂದ ಒಂದು ಬದಿ ರಸ್ತೆಯಿಂದ ಮತ್ತೊಂದು ಬದಿಯ ರಸ್ತೆಗೆ ಲಾರಿ ಬಂದು ನಿಂತಿದೆ. ಅದೃಷ್ಟವಶಾತ್ ಗ್ಯಾಸ್ ತುಂಬಿದ ಲಾರಿ ಪಲ್ಟಿಯಾಗಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೈವೆ ಪೆಟ್ರೋಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆ ಗ್ಯಾಸ್ ತುಂಬಿದ ಟ್ಯಾಂಕರ್‌ನ್ನು ತೆರವುಗೊಳಿಸುವ ಕೆಲಸ ಮಾಡಿದರು. ಕೆಲ ಹೊತ್ತು ಆ ಮಾರ್ಗವನ್ನು ಬಂದ್ ಸಹ ಮಾಡಲಾಗಿತ್ತು.

Tags:

error: Content is protected !!