Uncategorized

ಗೋಕುಲ್ ರಸ್ತೆಯಲ್ಲಿ ಮುಂದುವರೆದ ಕಳ್ಳರ ಹಾವಳಿ:ಗೋಕುಲ್ ಠಾಣೆಯ ಪೊಲೀಸರ್ ಕಾರ್ಯವೈಖರಿಗೆ ಸಾರ್ವಜನಿಕರ ಬೇಸರ

Share

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಇದೀಗ ಗೋಕುಲ ರಸ್ತೆಯ ಸುತ್ತ ಮುತ್ತಲು ವಾಸ ಮಾಡುವ ಸಾರ್ವಜನಿಕರು ಕೇಳುವಂತಾಗಿದ್ದು, ಇದಕ್ಕೆ ಕಾರಣ ಗೋಕುಲ್ ರೋಡ್ ನಲ್ಲಿ ಕಳ್ಳರ ಹಾವಳಿ.

ಕಳೆದ ಕೆಲವು ದಿನಗಳಿಂದ ಗೋಕುಲ್ ರಸ್ತೆಯ ಗಿರಿ ನಗರದಲ್ಲಿ ಕಳ್ಳರು ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೈಕ್ ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಕೂಡ ಪ್ರಸಾರ ಆಗಿತ್ತು. ಆದ್ರೆ ಇದೀಗ ಅದೇ ಏರಿಯಾದಲ್ಲಿ ಕಳ್ಳರು ತಮ್ಮ ಕಾಯಕ ಮುಂದುವರೆಸಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

ಸೋಮವಾರ ಮಧ್ಯಾರಾತ್ರಿ 1 ಗಂಟೆಗೆ ಕಳ್ಳರು ಮನೆಯೊಂದಕ್ಕೆ ಕನ್ನ ಹಾಕಿರೋ ದ್ರಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ,ಹೀಗಾಗಿ ಸಹಜವಾಗಿ ಗೋಕುಲ್ ಠಾಣೆಯ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಮೇಲಾದ್ರು ಗೋಕುಲ್ ಠಾಣೆಯ ಪೊಲೀಸರು ಆದಷ್ಟು ಬೇಗ ಕಳ್ಳರನ್ನು ಬಂಧನ ಮಾಡಿ ಸಾರ್ವಜನಿಕರ ಆತಂಕ ದೂರ ಮಾಡುವ ಕೆಲಸವನ್ನು ಮಾಡಬೇಕಿದೆ.

Tags:

error: Content is protected !!