Uncategorized

ಮಾರಿಹಾಳದಲ್ಲಿ ಪೋಲಿಸರ ದಿಢೀರ್ ದಾಳಿ: ಇಸ್ಪೀಟ್ ಅಡ್ಡೆ ಜಪ್ತಿ, 6 ಜೂಜುಕೋರರ ಬಂಧನ!

Share

ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡಡೆ ಮೇಲೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 6 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 23,800 ರೂಪಾಯಿ ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 27ರಂದು ನಾಗೇಶ ಭರಮಶೆಟ್ಟಿ ಫಾರ್ಮ್ ಹೌಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ‘ಅಂದರ್-ಬಾಹರ್’ ಇಸ್ಪೀಟ್ ಆಟವಾಡುತ್ತಿದ್ದಾಗ ಮಾರಿಹಾಳ ಠಾಣೆಯ ಹೆಚ್‌ಎಸ್ಐ ಮಂಜುನಾಥ ಹುಲಕುಂದ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ. ಈ ವೇಳೆ ಮಹಾಂತೇಶ ಬಂಬರಗಿ, ಇಸ್ಮಾಯಿಲ್ ದೇಸಾಯಿ, ರಮೇಶ ನಾಯಕ, ಸಿದ್ಧಪ್ಪ ಭದ್ರಶೆಟ್ಟಿ, ಪ್ರಕಾಶ ಗಸ್ತಿ ಮತ್ತು ನಾಗಪ್ಪ ಬಾಗರಾಯಿ ಎಂಬ 6 ಜನರನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಜೂಜಾಟ ನಡೆಸುತ್ತಿದ್ದ ಅಶೋಕ್ ಬಾಗರಾಯಿ ಸೇರಿದಂತೆ ಅರ್ಜುನ್, ಭೀಮಪ್ಪ, ಕಿರಣ್ ಹಾಗೂ ಗಂಗಪ್ಪ ಎಂಬ ಐವರು ಆರೋಪಿಗಳು ದಾಳಿ ವೇಳೆಯಲ್ಲಿ ಪರಾರಿಯಾಗಿದ್ದಾರೆ. ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಯಶಸ್ವಿ ದಾಳಿ ನಡೆಸಿದ ಪೊಲೀಸ್ ತಂಡವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.

Tags:

error: Content is protected !!