Uncategorized

ಮಹಾನಗರ ಪಾಲಿಕೆ ಹಾಗೂ ‘ಬುಡಾ’ ಪ್ರಗತಿ ಪರಿಶೀಲನಾ ಸಭೆ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಿ ರಸ್ತೆ ಸರಿಪಡಿಸದಿದ್ದರೆ ಮುಂದಿನ ಹಣ ಬಿಡುಗಡೆ ತಡೆ ನಿಯಮ ಉಲ್ಲಂಘಿಸಿದರೆ ಹಣ ಕಡಿತಗೊಳಿಸಿ ಶಿಸ್ತುಕ್ರಮ; ಸಚಿವ ಯತೀಂದ್ರ ಸಿದ್ಧರಾಮಯ್ಯ

Share

ಬೆಳಗಾವಿಯ ಸುವರ್ಣಸೌಧದಲ್ಲಿ ನಗರ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಹಾಗೂ ‘ಬುಡಾ’ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ನಗರದಲ್ಲಿ ನಡೆಯುತವತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಗಿಸಿ ರಸ್ತೆ ಸರಿಪಡಿಸದಿದ್ದರೆ ಮುಂದಿನ ಹಣ ಬಿಡುಗಡೆ ತಡೆಯುವುದಲ್ಲದೆ, ನಿಯಮ ಉಲ್ಲಂಘಿಸಿದರೆ ಹಣ ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಬುಡಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಬೆಳಗಾವಿ, ಧಾರವಾಡ ಹಾಗೂ ಕಲಬುರಗಿಯಲ್ಲಿ ಎಲ್&ಟಿ (L&T) ಕಂಪನಿಯ ಕಾಮಗಾರಿ ವಿಳಂಬ ಮತ್ತು ರಸ್ತೆಗಳನ್ನು ತೋಡಿ ಮರುಸ್ಥಾಪಿಸದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಕ್ಕೆ ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಮುಗಿಸಿ ರಸ್ತೆ ಸರಿಪಡಿಸದಿದ್ದರೆ ಮುಂದಿನ ಹಣ ಬಿಡುಗಡೆ ತಡೆಯುವುದಲ್ಲದೆ, ನಿಯಮ ಉಲ್ಲಂಘಿಸಿದರೆ ಹಣ ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.


ಗ್ರಾಮೀಣ ಭಾರತ ಅಭಿವೃದ್ಧಿ ಯೋಜನೆಯ ಕುರಿತು ಹಿಂದಿನ ಅವಧಿಯಲ್ಲಿ ಶೇಕಡಾ 90 ರಷ್ಟು ಪೂರ್ಣಗೊಂಡಿದ್ದ ಕಾಮಗಾರಿಗಳು ಅರ್ಧಕ್ಕೇ ನಿಂತು ಸಾರ್ವಜನಿಕರ ಹಣ ಪೋಲಾಗುತ್ತಿರುವ ಬಗ್ಗೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಕೇವಲ ಕಾಗದದಲ್ಲಿ ಮಾತ್ರ ಕೆಲಸ ಮುಗಿದಿದೆ ಎಂದು ತೋರಿಸಿದರೆ ಸಾಲದು, ಸ್ಥಳದಲ್ಲಿ ನೈಜವಾಗಿ ಕೆಲಸ ಪೂರ್ಣಗೊಳ್ಳಬೇಕು ಎಂದು ಸ್ಪಷ್ಟಪಡಿಸಿ, ಅರ್ಧಕ್ಕೆ ನಿಂತ ಕಾಮಗಾರಿಗಳ ಪರಿಶೀಲನೆ ನಡೆಸಿ ಹೆಚ್ಚುವರಿ ಅನುದಾನದ ಪ್ರಸ್ತಾವನೆ ಸಲ್ಲಿಸಲು ಆದೇಶಿಸಿದರು.

ಇನ್ನು ರಾಮತೀರ್ಥ ನಗರ ಬುಡಾ (BUDA) ಬಡಾವಣೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಮತ್ತು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಾಸಕ ಅಭಯ್ ಪಾಟೀಲ್ ಹಾಗೂ ಉಪಮಹಾಪೌರ ಹಣುಮಂತ ಕೊಂಗಾಲಿ ಸಚಿವರ ಗಮನಕ್ಕೆ ತಂದರು. ಬಾಕಿ ಇರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿ ಮುಂದಿನ ಸಭೆಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು.

₹100 ಬಾಂಡ್ ಪೇಪರ್ ಆಧಾರಿತ ಲೇಔಟ್‌ಗಳಿಗೆ ಸರ್ಕಾರಿ ರಸ್ತೆ ಸಂಪರ್ಕವಿಲ್ಲದ ತಾಂತ್ರಿಕ ತೊಡಕಿನ ಕುರಿತು ಚರ್ಚಿಸಲಾಯಿತು. ಖಾಸಗಿ ಜಾಗದ ಮೂಲಕ ರಸ್ತೆ ಹಾದುಹೋಗಿದ್ದರೆ ಸರ್ಕಾರದಿಂದಲೇ ಜಮೀನು ಸ್ವಾಧೀನಪಡಿಸಿಕೊಂಡು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ಪರಿಹಾರ ನೀಡುವ ಬಗ್ಗೆ ಚಿಂತಿಸಲಾಯಿತು.

ಸಭೆಯಲ್ಲಿ ಮಹಾಪೌರ ಪ್ರೀತಿ ಕಾಮಕರ್, ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಬುಡಾ ಅಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!