ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳಿಗೆ ನೇಮಕಾತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ನಿಖಿಲ ಕತ್ತಿ ಆದೇಶ ಪತ್ರ ನೀಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಬೇಕು ಎಂದು ಮಹಾಳಾ ಮತ್ತು ಮಕ್ಕಳ ಕಲ್೬ಅಣ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಜಿ ವಿ ಬಾರಿಮನಿ ಹಾಗೂ ನಾಗೇಶ ವಾಳವೆ ಇವರಿಗೆ ಮಾರ್ಗದರ್ಶನ ನೀಡಿದರು.
ನಂತರ ಹುಕ್ಕೇರಿ ಸಾರಿಗೆ ಘಟಕಕ್ಕೆ ನೂತನ ಎರಡು ಬಸ್ ಗಳಿಗೆ ಪೂಜೆ ಸಲ್ಲಿಸಿ ಬಸ್ ಚಲಿಸುವ ಮೂಲಕ ಚಾಲನೆ ನೀಡಿದರು.


ನಂತರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಈಗ ನೂತನ ಎರಡು ಬಸ್‌ಗಳನ್ನು ಇಂಚಲಕರಂಜಿ – ಬೆಳಗಾವಿ ಮತ್ತು ಬೆಲ್ಲದ ಬಾಗೆವಾಡಿ – ಬೆಳಗಾವಿ ಮಾರ್ಗವಾಗಿ ಸಂಚರಿಸಲಿದ್ದು ಬರುವ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಇನ್ನೂ ಹೇಚ್ಚಿನ ಬಸ್‌ಗಳನ್ನು ಹುಕ್ಕೇರಿ ಘಟಕಕ್ಕೆ ನಿಡಲಾಗುವದು ಎಂದರು ( )
ನಗರದಲ್ಲಿ ಜರಗುವ ವಿವಿಧ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ವಾಹನ ಜನದಟ್ಟನೆಯಿಂದ ಶಾಸಕರು ಕಾರು ಕೆಲ ಕಾಲ ರಸ್ತೆಯಲ್ಲಿ ನಿಲ್ಲುವಂತಾಯಿತು.
ನಂತರ ಬೆಳವಿ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳಿಗಾಗಿ ಶಾಸಕರ ಅನುದಾನದಲ್ಲಿ ಕೋಳವೆ ಭಾವಿ ನಿಡಿದ್ದರಿಂದ ಗ್ರಾಮಸ್ಥರು ಶಾಸಕರಿಗೆ ಸತ್ಕರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಘಟಕ ಚಿಕ್ಕೋಡಿ ವಿಭಾಗಾಧಿಕಾರಿ ಮಹಾದೇವ ಮುಂಜಿ, ಡಿ ಎಂ ಇ ಅಡಹಳ್ಳಿಮಠ, ಘಟಕ ವ್ಯವಸ್ಥಾಪಕ ಚೇತನ ಸಾಣಿಕೋಪ್ಪ ಸೇರಿದಂತೆ ಮುಖಂಡರಾದ ಸತ್ತೆಪ್ಪಾ ನಾಯಿಕ,ಸಾತಪ್ಪಾ ಕರ್ಕಿನಾಯಕ, ಗುರು ಕುಲಕರ್ಣಿ, ರಾಯಪ್ಪಾ ಡೂಗ, ಚನ್ನಪ್ಪಾ ಗಜಬರ, ರಾಜು ಮುಜಾವರ, ಸುನಿಲ ಭೈರನ್ನವರ ಮೊದಲಾದವರು ಉಪಸ್ಥಿತರಿದ್ದರು.
