ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿದ್ದು, ಒದ್ದಾಡಿ ಪ್ರಾಣಬಿಡುತ್ತಿದ್ದರೂ, ಪತಿ ಅದನ್ನು ನೋಡುತ್ತಿದ್ದುದು ಅಷ್ಟೇ ಅಲ್ಲದೆ ಆ ಘಟನೆಯನ್ನು ಚಿತ್ರೀಕರಿಸಿದ ವಿಲಕ್ಷಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

ಭಾಗ್ಯಶ್ರೀ ಜಿಗಳೂರು (23) ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟ ಮಹಿಳೆ. ಭಾಗ್ಯಶ್ರೀ ಸ್ವತಃ ಜೀತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಸ್ಥಳದಲ್ಲಿದ್ಧ ಪತಿ ಪ್ರವೀಣ ಇದರ ವಿಡಿಯೋ ಮಾಡಿಕೊಂಡು ಸಂಬಂಧಿಕರಿಗೆ ಕಳಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಮದುವೆಯಾಗಿ 6 ವರ್ಷವಾಗಿದ್ದು, ಒಂದು ಗಂಡು ಮಗುವಿದೆ. ಪತಿ, ಪತ್ನಿಯ ಮಧ್ಯೆ ಜಗಳ ನಡೆದಿದ್ದು, ಕೆಲ ದಿನಗಳ ಹಿಂದೆ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ. ತವರು ಮನೆಯಿಂದ ಹೆಂಡತಿ ಕರೆ ತಂದಿದ್ದ ಪತಿ ಪ್ರವೀಣ ಹಾಗೂ ಭಾಗ್ಯಶ್ರೀ ಮಧ್ಯೆ ಸೋಮವಾರ ಮತ್ತೆ ಜಗಳವಾಗಿತ್ತು ಎಂದು ತಿಳಿದುಬಂದಿದೆ. ಎಸ್ ಪಿ ಸಿದ್ಧಾರ್ಥ ಗೋಯಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೀಳಗಿ ಪೊಲೀಸರು ತನಿಖೆ ನಡೆಸಿದ್ದಾರೆ.
” ಪತಿ, ಪತ್ನಿ ಮಧ್ಯೆ ಜಗಳಾವಾಗಿತ್ತು, ಭಾಗ್ಯಶ್ರೀ ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಜಗಳ ನಡೆದಿದೆ ಎಂದು ತಿಳಿದುಬಂದಿದೆ. ಪತಿ ಪ್ರವೀಣರನ್ನು ವಶಕ್ಕೆ ಪಡೆದಿದ್ದೇವೆ. ಭಾಗ್ಯಶ್ರೀ ಕುಟುಂಬದವರು ಪತಿಯೇ ಕೊಲೆ ಮಾಡಿದ್ದಾನೆಂಬ ಆರೋಪ ಮಾಡಿದ್ದಾರೆ, ತನಿಖೆ ನಡೆಸಲಾಗುತ್ತದೆ ” ಎಂದು ಎಸ್ ಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
