Dharwad

ಧಾರವಾಡದ ನಿಗದಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನ ವಿವಾದ.

Share

ಧಾರವಾಡದ ನಿಗದಿ ಗ್ರಾಮದಲ್ಲಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಕೊನೆಗೂ ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ ನೇತೃತ್ವದಲ್ಲಿ ವಿವಾದ ಸುಖಾಂತ್ಯಗೊಂಡಿದ್ದು, ಮಂಜುನಾಥ ಅವರ ನೇತೃತ್ವದಲ್ಲಿ ಸಭೆ ಯಶ್ವಿಯಾಗಿ ಮೂರ್ತಿ ಪ್ರತಿಷ್ಠಾಪನೆಗೆ ಗ್ರಾಮ ಪಂಚಾಯತಿ ಪಿಡಿಓಗೆ ಮನವಿ ಸಲ್ಲಿಸಲಾಯಿತು. ‌

ಹೌದು …. ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಇತ್ತಿಚೆಗೆ ಸಂಗೊಳ್ಳಿರಾಯಣ್ಣವರ ಮೂರ್ತಿ ಪ್ರತಿಷ್ಠಾಪನೆಯ ಕುರಿತು ಸಮದಾಯ ಜನ ಸೇರಿ ಇತರೆ ಜನರ ನಡುವೆ ಕೊಂಚ ಮನಸ್ಸು ಹುಟ್ಟಿಕೊಂಡಿತ್ತು. ಅಲ್ಲದೆ ಸಮುದಾಯದಲ್ಲೂ ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಕುರಿತು ಗೊಂದಲ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿಯವರು ಸಮುದಾಯದ ಜನರೊಂದಿಗೆ ಸಭೆ ಮಾಡಿ ಒಮತ್ತದ ನಿರ್ಧಾರಕ್ಕೆ ಬಂದರು. ಇಂದಿನ ಯುವ ಪೀಳಿಗೆ ಸೇರಿದಂತೆ ಮುಂಬರು ಯುವ ಸಮುದಾಯಕ್ಕೆ ಸ್ವತಂತ್ರಕ್ಕಾಗಿ ಹೋರಾಟ ಮಾಡಿದವರು ಸೇರಿದಂತೆ ಉತ್ತಮ ಸಮಾಜಿ ನಿರ್ಮಾಣಕ್ಕೆ ಶ್ರಮಿಸಿದವರು ಕುರಿತು ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಮೂರ್ತಿಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ಹಾಗಾಗಿ ಬ್ರಿಟಿಷರಿಗೆ ಶಿಂಹಸ್ವಪ್ನವಾಗಿ ಕಾಡಿದ ಸಂಗೊಳ್ಳಿರಾಯಣ್ಣವರ ಮೂರ್ತಿ ಸ್ಥಾಪಿಸುವುದ ಅಗತ್ಯವಿದೆ ಎಂಬ ಎಲ್ಲರ ಅಭಿಪ್ರಯಾದೊಂದಿಗೆ ಸಭೆ ಯಶಸ್ವಿಯಾಗಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲು ಮಂಜುನಾಥ ಅವರ ನೇತೃತ್ವದಲ್ಲಿ ಸಭೆಯ ಬಳಿಕ ನಿಗದಿ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಮನವಿ ಸಲ್ಲಿಸಲಾಯಿತು. ‌ಈ ವೇಳೆ ಕುರುಬ ಸಮುದಾಯ ಪ್ರಮುಖರು ಸೇರಿದಂತೆ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Tags:

error: Content is protected !!