Belagavi

ಯೋಧರ ತ್ಯಾಗ ಬಹುದೊಡ್ಡದು : ನಿವೃತ್ತ ಗೌ.ಕ್ಯಾಫ್ಟನ್ ಚಂಗಪ್ಪಾ ಪಾಟೀಲ ಅಭಿಮತ

Share

ಭಾರತ ಶಾಂತಿಶೀಲ ದೇಶ. ಸಹಬಾಳ್ವೆ ದೇಶ. ಆದರೆ ತನ್ನ ಮೇಲೆ ದಾಳಿ ಮಾಡಿದ ವೈರಿಗಳನ್ನು ತಿರುಗಿ ನೋಡುವಂತೆ ಪಾಠ ಕಲಿಸಿದೆ. ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದು ಇಂದು ಇತಿಹಾಸ. ಹುತಾತ್ಮರಾದ ಎಲ್ಲ ಯೋಧವೀರರನ್ನು ತ್ಯಾಗವನ್ನು ಸ್ಮರಿಸಬೇಕು ಎಂದು ನಿವೃತ್ತ ಗೌರವಾನ್ವಿತ ಕ್ಯಾಫ್ಟನ್ ಚಂಗಪ್ಪಾ ಪಾಟೀಲ ಹೇಳಿದರು.

ಅವರು ಲಿಂಗರಾಜ ಕಾಲೇಜಿನಲ್ಲಿ ಎನ್‌ಸಿಸಿ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ ದಿವಸ್‌ದ 27ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ನಾವು ಇಲ್ಲಿಯವರೆಗೆ ನಮ್ಮ ಮೇಲೆ ದಾಳಿ ಮಾಡಿದವರ ಇತಿಹಾಸವನ್ನು ಓದುತ್ತಾ ಬಂದಿದ್ದೇವೆ. ಹಾಗಲ್ಲ, ನಮ್ಮ ದೇಶದ ವೀರರು ತಮ್ಮ ಪ್ರಾಣದ ಹಂಗು ತೊರೆದು ಭಾರತ ಮಾತೆಯನ್ನು ಸಂರಕ್ಷಿಸಿದ ಪಾಠವನ್ನು ಓದುವ ಕಾಲವಿದು. ಪಾಕಿಸ್ತಾನದ ಸೈನ್ಯಕ್ಕೆ ತಕ್ಕ ಪಾಠವನ್ನು ಕಲಿಸಿ ವಿಜಯ ಪತಾಕೆಯನ್ನು ಹಾರಿಸಿದ ಅವರ ತ್ಯಾಗ ದೊಡ್ಡದು ಎಂದರು. ಇಂದಿನ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಮೂಡಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು ಬಹುಮುಖ್ಯ, ಕಠಿಣ ಪರಿಶ್ರಮ, ಉತ್ತಮವಾದ ಆರೋಗ್ಯ, ಅದಕ್ಕಾಗಿ ದೇಹದಾರ್ಢ್ಯ ಹಾಗೂ ಉತ್ತಮವಾದ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು.

26 ಕರ್ನಾಟಕ ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ ಅವರು ಮಾತನಾಡಿ, ನಮ್ಮಲ್ಲಿ ದೇಶ ಪ್ರೇಮ ಎನ್‌ಸಿಸಿ ಕಲಿಸಿಕೊಡುತ್ತಿದೆ. ಸೈನಿಕನಾಗಿಯೇ ದೇಶ ಸೇವೆ ಮಾಡಬೇಕೆಂದಲ್ಲ. ಈ ದೇಶದ ಪ್ರತಿಯೊಂದನ್ನು ಪ್ರೀತಿಸುವ ಹಾಗೂ ಗೌರವಿಸುವ ಕೆಲಸವು ಅಷ್ಟೇ ಮುಖ್ಯವಾಗಿದೆ. ಪ್ರತಿಯೊಂದನ್ನು ಸಂರಕ್ಷಿಸಿದಾಗ ದೇಶಸೇವೆ ಎನಿಸಿಕೊಳ್ಳುವುದು. ಹಾಗಾಗಿ ನಾವು ರಾಷ್ಟಿçÃಯ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಾದ ಸಂದರ್ಭವಿದು. ಅನೇಕ ವೀರರು ಈ ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿ ದೇಶವನ್ನು ಸಂರಕ್ಷಿಸಿದ್ದಾರೆ. ಅಂತಹ ಭಾರತೀಯ ಯೋಧರಿಗೆ ನಾವು ನಮನಗಳನ್ನು ಸಲ್ಲಿಸಲೇಬೇಕೆಂದು ಕರೆನೀಡಿದರು.

ಎನ್‌ಸಿಸಿ ಅಧಿಕಾರಿ ಮೇಜರ್ ಡಾ.ಮಹೇಶ ಗುರನಗೌಡರ ಪ್ರಾಸ್ತಾವಿಕ ನುಡಿಗಳನ್ನಾಡಿ, ಭಾರತ ಪಾಕಿಸ್ತಾನವನ್ನು ನಾಲ್ಕು ಮಹತ್ವದ ಯುದ್ಧದಲ್ಲಿ ಸೋಲಿಸಿ ಪಾಠ ಕಲಿಸಿದೆ ಆದರೂ ಬುದ್ಧಿ ಬಂದಿಲ್ಲ. ಆಫರೇಷನ್ ಸಿಂಧೂರದಲ್ಲಿಯೂ ಕೊಟ್ಟ ಏಟು ಅಷ್ಟಿಷ್ಟಲ್ಲ. ವೈರಿ ರಾಷ್ಟçಕ್ಕೆ ಭಾರತೀಯ ಯೋಧರು ಕಾಲಕಾಲಕ್ಕೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ಅಂತಹ ಎಲ್ಲ ವೀರರನ್ನು ನಾವೆಲ್ಲ ಸ್ಮರಿಸಬೇಕು. ದೇಶಕ್ಕಾಗಿ ಯುವಜನಾಂಗ ಹೋರಾಡುವಂತಾಗಬೇಕು. ಭಾರತ ಭೂಮಿಯನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ದೇಶಾಭಿಮಾನ ಬಹುಮುಖ್ಯವಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಡಾ.ಜಿ.ಎನ್.ಶೀಲಿ ವಹಿಸಿ ಮಾತನಾಡಿದರು.

ವೇದಿಕೆಯ ಮೇಲೆ ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 26 ಬಟಾಲಿಯನ್ ಸುಬೇದಾರ ಮೇಜರ್ ಕಲ್ಲಪ್ಪಾ ಪಾಟೀಲ, ನಿವೃತ್ತ ಗೌ.ಕ್ಯಾಫ್ಟನ್ ಚಂಗಪ್ಪಾ ಪಾಟೀಲ, ಎನ್‌ಸಿಸಿ ಇನ್ಸಕ್ಟರ್ ಅರ್ಜುನ್ ಅವರನ್ನು ಸತ್ಕರಿಸಲಾಯಿತು. ಡಾ.ಸಿ.ರಾಮರಾವ್, ಡಾ.ಶಿವಾನಂದ ಬುಲಬುಲೆ, ಡಾ.ಎಚ್.ಎಂ. ಚನ್ನಪ್ಪಗೋಳ, ಪ್ರೊ.ಸುನೀತ ಮೂಡಲಗಿ, ಪ್ರೊ.ನಂದನ ಕಟಾಂಬಳೆ, ಡಾ.ಮಹಾಂತೇಶ ಸೊಗಲ, ಡಾ.ವಿ.ಪಿ.ಹಿರೇಮಠ, ಸೀನಿಯರ್ ಶಿವು ಕಮ್ಮಾರ ಪಾಲ್ಗೊಂಡಿದ್ದರು. ಕೆಡೆಟ್ ಸೃಷ್ಠಿ ಹಿರೇಮಠ, ಕೆಡೆಟ್ ಪವಿತ್ರಾ ನಾಯ್ಕ, ಕೆಡೆಟ್ ಸಿದ್ಧಾರ್ಥ ನಿರೂಪಿಸಿದರು.

Tags:

error: Content is protected !!