State

ಖಾಸಗಿ ಶಾಲೆ ನಡೆಸುವವರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು; ಸಿಎಂ ಡಿ.ಕೆ.ಶಿವಕುಮಾರ್

Share

ಖಾಸಗಿ ಶಾಲೆ ನಡೆಸುವವರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಚಿತ್ರದುರ್ಗ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳು ಬೆಂಗಳೂರು ಮಟ್ಟಕ್ಕೆ ಬೆಳೆಯಬೇಕೆಂಬ ಉದ್ದೇಶವಿದೆ. ಹಿಂದೆ ನನ್ನ ಮತ್ತು ಖಾಸಗಿ ಶಾಲೆ ನಡೆಸುವವರ ನಡುವೆ ಒಪ್ಪಂದ ಆಗಿತ್ತು ಎಂದರು.ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಲು ಮಿತಿ ಇದೆ. ದೊಡ್ಡ ಖಾಸಗಿ ಶಾಲೆ ನಡೆಸುವವರು ಉದ್ಯಮಿಗಳಾಗಿರುತ್ತಾರೆ, ಅವರಿಗೆ ಹೇಳಿದ್ದೇನೆ, ಸಿಎಸ್ಆರ್ ಪಾಲಿಸಿಯಂತೆ ಅವರು ಹಣ ಖರ್ಚು ಮಾಡಲಿ. ಸರ್ಕಾರದಲ್ಲಿ 50 ಸಾವಿರ ಶಿಕ್ಷಕರಿದ್ದರೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ಹೇಳಿದರು.

ಕ್ಯಾಬಿನೆಟ್ ವಿಸ್ತರಣೆ ಮುಂದಿನ ವಾರದಲ್ಲಿ ನಡೆಯಲಿದೆ ಎಂದ ಸಿಎಂ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕೇಂದ್ರ ಸರ್ಕಾರ ಕಣ್ಣು ತೆರದಿದೆ. ನಾವು ಸಂಸತ್ತಿನಲ್ಲಿ ಚರ್ಚೆ ನಡೆಸುತ್ತೇವೆ, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳಿದ್ದೇವೆ. ಇಡೀ ದೇಶದಲ್ಲಿ ವಿದ್ಯಾರ್ಥಿಗಳು ದಂಗೆ ಎದ್ದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡೋ ಹಕ್ಕು ಎಲ್ಲರಿಗೂ ಇದೆ ಎಂದು ತಿಳಿಸಿದರು.
ಕೆಪಿಎಸ್ಸಿ ಅಧ್ಯಕ್ಷರನ್ನು ಬಿಜೆಪಿಯವರೇ ಮಾಡಿದ್ದು, ಅವರೇ ತಗಲಾಕಿಕೊಂಡರು. ಈಗ ಪತ್ರ ಬರೆದು ಅಧ್ಯಕ್ಷರನ್ನು ತೆಗೆಯಿರಿ ಎಂದಿದ್ದಾರೆ. ರಾಜ್ಯಪಾಲರು ನನಗೆ ಪತ್ರ ಬರೆದಿದ್ದಾರೆ, ನಾನು ಅನುಮತಿ ನೀಡಿದ್ದೇನೆ ಎಂದು ಸಿಎಂ ಹೇಳಿದರು.

ಬಿಡದಿ ರೈತರು ನಮ್ಮವರೇ, ಅವರನ್ನು ಯಾರೂ ಕೈ ಬಿಡುವ ಪ್ರಶ್ನೆ ಇಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.ಕೇವಲ ರಾಮನಗರ, ಬೆಂಗಳೂರಲ್ಲಿ ಸಭೆ ನಡೆಯುತ್ತಿತ್ತು. ಈ ಬಾರಿ ಇಲ್ಲಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ನಾಳೆ ಡಿ. ಸುಧಾಕರ್ ನುಡಿ ನಮನಕ್ಕೂ ಬರುತ್ತೇನೆ ಎಂದು ಹೇಳಿದರು.

Tags:

error: Content is protected !!