Khanapur

ಖಾನಾಪುರ – ಹಿರೇಮನ್ನೋಳಿಯಲ್ಲಿ ನೂತನ ಬಸ್ ಸಂಚಾರ ಆರಂಭ: ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ ಚಾಲನೆ

Share

ಖಾನಾಪುರ ತಾಲೂಕಿನ ಹಿರೇಮನ್ನೋಳಿ ಗ್ರಾಮಕ್ಕೆ ನೂತನ ಬಸ್ ಸಂಚಾರಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ ಚಾಲನೆ ನೀಡಿದರು. ಗ್ರಾಮಸ್ಥರ ಸುದೀರ್ಘ ದಿನಗಳ ಬೇಡಿಕೆಯನ್ನು ಈಡೇರಿಸಿದ ಹಿನ್ನೆಲೆಯಲ್ಲಿ, ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ವಿವೇಕ್ ತಡ್ಕೋಡ್ ಹಾಗೂ ಬಸ್ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿದರು.

ಖಾನಾಪುರದಿಂದ ಎಂ.ಕೆ.ಹುಬ್ಬಳ್ಳಿ ಮಾರ್ಗದ ಹಿರೇಮನ್ನೋಳಿ ಗ್ರಾಮದ ಮೂಲಕ ನೂತನ ಬಸ್ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಸೂರ್ಯಕಾಂತ್ ಕುಲಕರ್ಣಿ, “ಡಾ. ಅಂಜಲಿತಾಯಿ ನಿಂಬಾಳ್ಕರ್ ಅವರ ಶಿಫಾರಸಿನ ಮೇರೆಗೆ ಗ್ಯಾರಂಟಿ ಯೋಜನೆಗಳ ಸಮಿತಿಯು ತಾಲೂಕಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಹಿರೇಮನ್ನೋಳಿ ಗ್ರಾಮಸ್ಥರು ಹಾಗೂ ಸಮಿತಿ ಸದಸ್ಯ ವಿವೇಕ್ ತಡ್ಕೋಡ್ ಅವರ ಮನವಿಯಂತೆ ಈ ಬಸ್ ಸೇವೆಯನ್ನು ಆರಂಭಿಸಲಾಗಿದೆ. ತಾಲೂಕಿನ ಯಾವುದೇ ಸಾರ್ವಜನಿಕ ಸಮಸ್ಯೆಗಳಿದ್ದಲ್ಲಿ ಖಾನಾಪುರ ತಾಲೂಕು ಪಂಚಾಯತಿಯಲ್ಲಿರುವ ನಮ್ಮ ಕಚೇರಿಯನ್ನು ಸಂಪರ್ಕಿಸಬಹುದು, ಪಕ್ಷಭೇದ ಮರೆತು ಪ್ರತಿಯೊಬ್ಬರ ಕೆಲಸವನ್ನು ಮಾಡಿಕೊಡಲಾಗುವುದು” ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಸದಸ್ಯ ವಿವೇಕ್ ತಡ್ಕೋಡ್, ಚಾಲಕ ಮಹಬೂಬ್ ಪಾರಸ್, ನಿರ್ವಾಹಕ ಮಣಿಯಾರ್, ಗ್ರಾ.ಪಂ. ಪಿಡಿಒ ರಾಜು ತಳವಾರ್, ಬಾಬು ದೇಸನೂರು, ಅಶೋಕ್ ನೇಮನ್ನವರ, ಶಿವನಪ್ಪ ಘಾಡಿಕೊಪ್ಪ, ಬಾಬು ಪಚ್ಚರ, ನಿಂಗಪ್ಪ ಹೊಸಮನಿ, ಕೋಮಲ್ ಕರೇನ್ನವರ, ನಿಂಗಪ್ಪ ದೇವಲತ್ತಿ, ಗ್ರಾಮದ ಪಂಚಮಂಡಳಿಯವರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!