ಧಾರವಾಡದಲ್ಲಿ ಬಾಲಗರ್ಭಿಣಿ ಪ್ರಕರಣಗಳ ಹೆಚ್ಚಳ ಖಂಡಿಸಿ ಹಾಗೂ ಸ್ಥಗಿತಗೊಂಡಿರುವ ಸಾಮಾಜಿಕ ಭದ್ರತಾ ಪಿಂಚಣಿ ಹಣದ ಬಿಡುಗಡೆ ಆಗ್ರಹಿಸಿ, ಧಾರವಾಡದಲ್ಲಿ ಎಐಎಮ್‌ಎಮ್ ಸಂಘಟನೆ ಪದಾಧಿಕಾರಿಗಳು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಧಾರವಾಡ ಜಿಲ್ಲಾಧಿಕಾರಿ ಆರ್ ಸ್ನೇಹಲ್ ಅವರನ್ನು ಡಿಸಿ ಕಚೇರಿ ಆವರಣದಲ್ಲಿ ಭೇಟಿ ಮಾಡಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಮಿತಿಯ ಸದಸ್ಯರು ಹಾಗೂ ಮಹಿಳೆಯರು, ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ ಗರ್ಭಿಣಿ ಪ್ರಕರಣ ತಡೆಯಲು ಕಠಿಣ ಕ್ರಮ ಕೈಗೊಳ್ಳುವುದು ಹಾಗೂ ಜಾಗೃತಿ ಅಭಿಯಾನ ಸೇರಿ ಸಹಾಯವಾಣಿ ತೆರೆಯುವ ಕುರಿತು ಮನವಿ ಮಾಡಿದರು. ಜತೆಗೆ ಇದೇವೇಳೆ ಸಾಮಾಜಿಕ ಭದ್ರತಾ ಪಿಂಚಣಿ ಹಣದ ಬಿಡುಗಡೆಗೆ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಬಳಿಕ ಮಾತನಾಡಿದ ಸಮಿತಿಯ ಮುಖಂಡೆ ಮಧುಲತಾ, ಧಾರವಾಡ ಜಿಲ್ಲೆಯಲ್ಲಿ ಬಾಲ ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಲೈಂಗಿಕ ಸೌರ ಗಹನ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾನವ ಕುಲವೇ ತಲೆ ತಗ್ಗಿಸುವಂತಹ ಘಟನೆಗಳಾಗಿವೆ. ಶಿಕ್ಷಣ ಪಡೆದು ಜಗತ್ತು ಏನೂ, ಸಮಾಜ ಏನೂ ಎಂದು ಅರಿಯುವ ಮುನ್ನವೇ ಬಾಲ ಮಹಿಳೆಯರನ್ನು ಗರ್ಭಿಣಿ ಮಾಡಲಾಗುತ್ತಿದೆ.

ಇದೂ ಮಹಿಳಾ ಕುಲದ ಮೇಲೆ ನಡೆಯುವ ಅತ್ಯಂತ ದೊಡ್ಡ ದೌರ್ಜನ್ಯವಾಗಿದೆ. ಮಾಧ್ಯಮಗಳು ಇದರ ಬಗ್ಗೆ ವರದಿಗಳನ್ನು ಮಾಡುತ್ತಲೇ ಬಂದಿವೆ, ಆದರೆ ಜಿಲ್ಲಾಡಳಿತ ಅಧಿಕಾರಿಗಳ ವರ್ಗ ಸೇರಿ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದು ದೌರ್ಜನ್ಯ ನಡೆಸುವವರಿಗೆ ಪುಷ್ಟಿ ನೀಡಿದಂತಾಗುತ್ತಿದೆ. ಹಾಗಾಗಿ ಈ ಕೂಡಲೇ ಬಾಲ ಮಹಿಳೆಯರ ಗರ್ಭಿಣಿ ಪ್ರಕರಣಗಳನ್ನು ಗಂಭೀರ್ ಪರಿಗಣಿಸಿ, ಇದರಲ್ಲಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಜತೆಗೆ ಸಾಮಾಜಿಕ ಭದ್ರತಾ ಪಿಂಚಣಿ ಹಣದ ಬಿಡುಗಡೆಗೆಯನ್ನು ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು.
