Khanapur

ಅಂಗನವಾಡಿಗಳ ಅಸ್ತಿತ್ವಕ್ಕೇ ಕಂಟಕ?: ಖಾನಾಪುರದಲ್ಲಿ ಸರ್ಕಾರಕ್ಕೆ ಸಿಬ್ಬಂದಿಯಿಂದ ಖಡಕ್ ಮನವಿ

Share

ಸರ್ಕಾರಿ ಶಾಲೆಗಳಲ್ಲಿ LKG-UKG ತರಗತಿಗಳು ಆರಂಭವಾದ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತೀವ್ರ ಕುಸಿತ ಕಂಡಿದೆ. ಇದರ ಜೊತೆಗೆ ಹೆಚ್ಚುವರಿ ಕೆಲಸದ ಭಾರ ಹಾಗೂ ಮೊಟ್ಟೆ ವಿತರಣೆಯ ಅನುದಾನ ಕೊರತೆಯಿಂದ ಬೇಸತ್ತ ಖಾನಾಪುರ ತಾಲೂಕು ಅಂಗನವಾಡಿ ಸಿಬ್ಬಂದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಖಾನಾಪುರ ತಾಲೂಕು ಅಂಗನವಾಡಿ ವರ್ಕರ್ಸ್ ಅಂಡ್ ಹೆಲ್ಪರ್ಸ್ ಫೆಡರೇಶನ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಅವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ LKG-UKG ಆರಂಭವಾಗಿದ್ದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇವು ಮುಚ್ಚುವ ಭೀತಿ ಎದುರಾಗಿದೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ 10 ರೂಪಾಯಿ ಇದ್ದರೂ ಸರ್ಕಾರ ಕೇವಲ 6 ರೂಪಾಯಿ ನೀಡುತ್ತಿರುವುದು, ಪೋಷಣ್ ಟ್ರ್ಯಾಕರ್ ಅಪ್‌ಡೇಟ್, ಬಿಎಲ್‌ಒ (BLO) ಹಾಗೂ ಗೃಹಜ್ಯೋತಿಯಂತಹ ಹೆಚ್ಚುವರಿ ಇಲಾಖಾ ಕೆಲಸಗಳ ಭಾರ ಮತ್ತು ಪಡಿತರ ವಿತರಣೆಯ ವಿಳಂಬದಿಂದ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದು, ಸಮಸ್ಯೆಗಳಿಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

Tags:

error: Content is protected !!