ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮದ GE Societyಯ ಪರಮ ಜ್ಯೋತಿ ಪ್ರೌಢಶಾಲೆಯ 2002, 2003 ಹಾಗೂ 2004ನೇ ಸಾಲಿನ SSLC ಹಳೆಯ ವಿದ್ಯಾರ್ಥಿಗಳಿಂದ ಭವ್ಯ ‘ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಗೆ ವಿದ್ಯೆ ನೀಡಿದ ಗುರುಗಳನ್ನು ಬೃಹತ್ ಪ್ರಮಾಣದಲ್ಲಿ ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳು ಭಕ್ತಿಪೂರ್ವಕ ಗೌರವ ಸಮರ್ಪಿಸಿದರು.


ಪರಮಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ GE Society ಅಧ್ಯಕ್ಷ ನ್ಯಾಯವಾದಿ ಉಮೇಶ್ ಮೂಲಿಮನಿ ಅವರ ಅಧ್ಯಕ್ಷತೆಯಲ್ಲಿ ಈ ಭವ್ಯ ಕಾರ್ಯಕ್ರಮ ನೆರವೇರಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪಿ. ವೈ. ಪಾಟೀಲ್, “ದಶಕಗಳು ಕಳೆದರೂ ವಿದ್ಯಾರ್ಥಿಗಳು ನಮ್ಮ ಸೇವೆಯನ್ನು ಗುರುತಿಸಿ ಸತ್ಕರಿಸಿದ್ದು ಸಂತಸ ತಂದಿದೆ, ಜೀವನದಲ್ಲಿ ಮುಂದೆ ಬರಲು ಒಳ್ಳೆಯ ಗುರುವಿನ ಆಶೀರ್ವಾದ ಮುಖ್ಯ” ಎಂದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕರಾದ S.G. ಕುಲಕರ್ಣಿ, S.R. ಎಮ್ಮಿ, B.V. ಮೂಲಿಮನಿ, P.S. ಹುಲಮನಿ, L.S. ಕುಂದೇಕಾರ್, B.B. ಕರವೀರನವರ್, ರುದ್ರಪ್ಪ ಕೋಲ್ಕಾರ್ ಹಾಗೂ N.S. ನಾಯಕ್ ಅವರನ್ನು ಸತ್ಕರಿಸಲಾಯಿತು. ಅಗಲಿದ ಗುರು-ಸಿಬ್ಬಂದಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಲಾಯಿತು.

ಪ್ರೊ. ಶಿವಾನಂದ ಮೂಲಿಮನಿ ಹಾಗೂ M.S. ನಾಯಕ್ ಉಪಸ್ಥಿತರಿದ್ದ ಈ ಸಮಾರಂಭವನ್ನು ಪ್ರಾಧ್ಯಾಪಕ ವಿಜಯ್ ಇಟಗಿ ಮತ್ತು ಸವಿತಾ ಟಕಾಯಿ ನಿರೂಪಿಸಿದರು. ಸಂಘಟಕರಾದ ಡಾ. ವಿಜಯ್ ಯಮಕನಮರಡಿ, ಮಹೇಶ್ ಕಂಬಳಿ, ತೌಶೀಫ್ ಭಾಗವಾನ್, ಯಾಸೀನ್ ಅತ್ತಾರ, ಸಾಧಿಕ್ ಮನಿಯಾರ, ಪುಂಡಲೀಕ ಕಾತಗಾರ, ರಾಜು ಜಯಗೌಡ್ರ, ಮಂಜುನಾಥ್ ಬಡಸದ, ರವಿ ಹುಲಿಕವಿ, ಮಹಾವೀರ ಮಂಡೇದ, ನಾಗರಾಜ ಹುಬ್ಬಳ್ಳಿ, ಶೈಲಾ ಕಂಬಳಿ ಹಾಗೂ ಶಿಲ್ಪಾ ದೊಡ್ಡವಾಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಮೆಚ್ಚುಗೆಗೆ ಪಾತ್ರರಾದರು.
