ಹುಕ್ಕೇರಿ ಶಾಸಕ ದಿವಂಗತ ಉಮೇಶ ಕತ್ತಿಯವರ ಕನಸು ನನಸು ಮಾಡಿದ ಹಾಲಿ ಶಾಸಕ ನಿಖಿಲ್ ಕತ್ತಿ.
ಹೌದು ಕಳೆದ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ಅಂದಿನ ಶಾಸಕ ಉಮೇಶ ಕತ್ತಿ ಯವರು ಹುಕ್ಕೇರಿ ಮತಕ್ಷೇತ್ರದಲ್ಲಿ ಅಡವಿ ಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಪಡೆದು ಕಾಮಗಾರಿಗಳಿಗೆ ಕಾರಣಾಂತರ ಗಳಿಂದ ಚಾಲನೆ ನೀಡದೆ ನೆನಗುದಿಗೆ ಬಿದ್ದ ಯೋಜನೆಯನ್ನು ಇಂದಿನ ಶಾಸಕ ನಿಖೀಲ ಕತ್ತಿ ತಮ್ಮ ಅವಧಿಯಲ್ಲಿ ಶಂಕರಲಿಂಗ ಮತ್ತು ಅಡವಿ ಸಿದ್ದೇಶ್ವರ ಏತ ನೀರಾವರಿಗಳ ಕಾಮಗಾರಿಗೆ ಚಾಲನೆ ನೀಡಿ ಇಂದು ಟ್ರಯಲ್ ಮಾಡುವ ಮೂಲಕ ರೈತರಿಗೆ ನೀರು ಹರಿಸುವ ಕಾರ್ಯ ಪೂರ್ಣ ಗೋಳಿಸಿದ್ದಾರೆ.


ಹುಕ್ಕೇರಿ ಕ್ಷೇತ್ರದ ಕೋಚರಿ ಮತ್ತು ಯರನಾಳ ಗ್ರಾಮದ ಹತ್ತಿರ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು 150 ಕೋಟಿ ರೂಪಾಯಿ ವೆಚ್ಚದ ಶಂಕರಲಿಂಗ ಮತ್ತು ಅಡವಿ ಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ಪೂರ್ಣ ವಾದ ಹಿನ್ನಲೆಯಲ್ಲಿ ಇಂದು ಶಾಸಕ ನಿಖಿಲ ಕತ್ತಿ ಪ್ರಾಯೋಗಿಕವಾಗಿ ಚಾಲನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಮ್ಮ ತಂದೆ ಯವರಾದ ಉಮೇಶ ಕತ್ತಿ ಮತ್ತು ಈ ಭಾಗದ ರೈತರ ಕನಸಿನ ನೀರಾವರಿ ಯೋಜನೆಗಳು ಇಂದು ಪೂರ್ಣ ಗೊಂಡು 14 ಗ್ರಾಮದ ಜಮಿನುಗಳಿಗೆ ನೀರಾವರಿ ಸೌಲಭ್ಯ ವದಗಿಸಲಾಗುತ್ತಿದೆ, ಡಿಸೆಂಬರ ತಿಂಗಳಿನಲ್ಲಿ ನೀರಾವರಿ ಸಚಿವರಿಂದ ಅಧಿಕೃತವಾಗಿ ಚಾಲನೆ ನೀಡಲಾಗುವದು, ಈ ವರ್ಷ ಮಳೆ ಅಭಾವದಿಂದ ರೈತರಿಗೆ ತೊಂದರೆ ಯಾಗದಿರಲಿ ಎಂದು ಟ್ರಯಲ್ ಮಾಡುವ ಮೂಲಕ ನೀರು ಹರಿಸಲಾಗುತ್ತಿದೆ ಕಾರಣ ರೈತರು ಪೈಪ ಲೈನಗಳಿಗೆ ಧಕ್ಕೆ ಯಾಗದಂತೆ ಸಮಾಧಾನದಿಂದ ನೀರು ಪಡೆಯಬೇಕು ಎಂದರು ( )
ಗುತ್ತಿಗೆದಾರ ಅಶೋಕ ಕಪ್ಪಲಗುದ್ದಿ ಮತ್ತು ಜೆ ಎನ್ ಶೇಟ್ಟಿ ಗ್ರುಪ್ ವತಿಯಿಂದ ಶಾಸಕರಿಗೆ ಸತ್ಕರಿಸಿ ಅಭಿನಂದಿಸಲಾಯಿತು ಹಾಗೂ ಮದಮಕ್ಕನಾಳ ಗ್ರಾಮಕ್ಕೆ ಬೆಳಗಿನ ಜಾವ ಶಾಲಾ ವಿದ್ಯಾರ್ಥಿಗಳಿಗೆ ವಿಷೇಶ ಬಸ್ ಪ್ರಾರಂಭಿಸಿದ ಶಾಸಕರಿಗೆ ಗ್ರಾಮದ ವತಿಯಿಂದ ಆನಂದ ಪಾಟೀಲ, ರಾಜು ತೇರಣಿ,ಎಸ್ ಕೆ ಪಾಟೀಲ ಸತ್ಕರಿಸಿದರು.
ನಂತರ ಪಂಪಹೌಸ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಪಂಪಹೌಸ ನಿರ್ಮಿಸಲು ಜಮಿನು ನೀಡಿದ ಬಾಳವ್ವಾ ನಾಯಿಕ ಇವರಿಗೆ ನಿಖಿಲ್ ಕತ್ತಿ ಕ್ಷೇತ್ರದ ಜನತೆ ಪರವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಅಧಿಕಾರಿಗಳಾದ ಎಸ್ ಎಸ್ ಗುಡ್ಡಾಕಾಯ್, ಸಂತೋಷ ಜಾಗನೂರಿ ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಶೀತಲ ಬ್ಯಾಳಿ, ಕಲಗೌಡಾ ಪಾಟೀಲ,ರಾಜು ಮುನ್ನೋಳ್ಳಿ, ಪವಣ ಪಾಟೀಲ, ಮಗೆಪ್ಪಾ ದೇಸಾಯಿ, ಟಿ ಡಿ ಪಾಟೀಲ, ಧನಂಜಯ ಪಾಟೀಲ, ಶ್ರೀಶೈಲ ಮಠಪತಿ, ಶಿವನಗೌಡಾ ಮದವಾಲ, ಹುಸೇನ ಮುಲ್ಲಾ, ಪರಪ್ಪಾ ದೇಸಾಯಿ, ಸದಾ ಬಾಗಿ ಮೊದಲಾದವರು ಉಪಸ್ಥಿತರಿದ್ದರು.
