ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಶ್ರೀ ಲಕ್ಷ್ಮಿ ದೇವಿ ಸಮೂದಾಯ ಭವನದಲ್ಲಿ ಜಾತ್ರಾ ಕಮೀಟಿ ಅದ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಯವರ ಅದ್ಯಕ್ಷತೆಯಲ್ಲಿ ವಿವಿಧ ಸಮಾಜದ ಮುಖಂಡರ ಮತ್ತು ಜಾತ್ರಾ ಕಮೀಟಿ ಸದಸ್ಯರ ಪೂರ್ವ ಭಾವಿ ಸಭೆಯಲ್ಲಿ ಹಿಂದಿನ ಜಾತ್ರೆಯ ಲೆಕ್ಕ ಪತ್ರ ಸರಿಯಾಗಿ ನಿಡಿಲ್ಲ ಕೆಲ ರಶೀದಿ ಪುಸ್ತಕಗಳು ಮಾಯವಾಗಿವೆ ಇದರಿಂದ ಹಣದ ದುರುಪಯೋಗ ವಾಗಿದೆ ಎಂದು ಸುನಿಲ ಪರ್ವತರಾವ,ನಂದು ಮುಡಸಿ, ಗಜಾನನ ಕೋಳ್ಳಿ, ರೋಹನ ನೇಸರಿ ಮೋದಲಾದವರು ಆರೋಪಿಸಿದರು,


ಹಾಲಿ ಜಾತ್ರಾ ಕಮಿಟಿ ಕಾರ್ಯದರ್ಶಿ ಬಸಗೌಡಾ ಪಾಟೀಲ ಮಾತನಾಡಿ ನೀಡಿದ ಲೆಕ್ಕ ಸರಿಯಾಗಿದೆ ಎಂದು ಅಂಕಿ ಅಂಶ ನೀಡುವಾಗ ಎರಡು ಕಡೆಯ ಬೆಂಬಲಿಗರಿಂದ ವಾದ ವಿವಾದ ಜೋರಾಗಿ ವಾಗ್ವಾದವಾಗಿ ಪರಿಸ್ಥಿತಿ ಕೈ ಮೀರಿ ನೂಕು ನೂಗ್ಗಾಟಗಳು ಜರುಗಿದವು.
ಕಮಿಟಿ ಅದ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಲೇಕ್ಕದಲ್ಲಿ ಯಾವುದೇ ಲೋಪವಾಗಿಲ್ಲಾ ಎಂದು ಆಣೆ ಪ್ರಮಾಣ ಮಾಡಿದರು ಸಹ
ಸಂಕೇಶ್ವರ ನಗರದ ಪ್ರಮುಖ ಮುಖಂಡರು ಏಕ ವಚನದಲ್ಲಿ ಜೋರು ದ್ವನಿಯಲ್ಲಿ ಶಕ್ತಿ ಪ್ರದರ್ಶನ ಮಾಡಿ ಮಾತಿನ ಚಕಮಕಿಯಿಂದ ಪರಿಸ್ಥಿತಿ ಉದ್ವಿಗ್ನ ವಾಗುವದನ್ನು ಗಮನಿಸಿದ ಪೋಲಿಸ್ ಇನ್ಸ್ಪೆಕ್ಟರ್ ಗಣಪತಿ ಕೊಗನೊಳ್ಳಿ ಮತ್ತು ಸಬ್ ಇನ್ಸಪೇಕ್ಟರ ವಿಠ್ಠಲ ನಾಯಿಕ ಮದ್ಯ ಪ್ರವೇಶಿಸಿ ಮುಖಂಡರ ಮನವೊಲಿಸಿ ಪರಿಸ್ಥಿತಿ ತಿಳಿ ಗೊಳಿಸಿದರು.
ನಂತರ ಮಾತನಾಡಿದ ಅಮರ ನಲವಡೆ ಲೆಕ್ಕ ಕೇಳುವವರಿಗೆ ಕಮೀಟಿಯಲ್ಲಿ ಸ್ಥಾನ ಬೇಕಾಗಿದೆ ಆದ್ದರಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆವೇಶದಿಂದ ಹೇಳಿದರು.
ಕೋನೆಯಲ್ಲಿ ಪಂಚ ಕಮಿಟಿ ಸದಸ್ಯ ಮತ್ತು ಹಕ್ಕುದಾರ ಕುನಾಲ ಪಾಟೀಲ ಮಾತನಾಡಿ ನಾವು ಯಾವದೇ ಪರಿಸ್ಥಿತಿಯಲ್ಲಿ ನಗರದ ವಿವಿಧ ಸಮಾಜದ ಮುಖಂಡರೊಂದಿಗೆ ಜಾತ್ರೆಯನ್ನು ಸುಗಮವಾಗಿ ಮಾಡುತ್ತೆವೆ ಮತ್ತು ಮಂಗಳವಾರ ಕೋನ ಬಿಡುವ ಮೂಲಕ ಜಾತ್ರೆಗೆ ಚಾಲನೆ ನಿಡಲಾಗುವದು ಎಂದು ಹೇಳಿ ಸಭೆಯನ್ನು ಮುಕ್ತಾಯ ಗೋಳಿಸಿದರು.
ಈ ಸಂದರ್ಭದಲ್ಲಿ ಸಂಜಯ ಶಿರಕೋಳಿ, ಶ್ರೀಕಾಂತ ಹತನೂರೆ, ರೋಹನ ನೇಸರಿ, ಶಂಕರರಾವ ಹೆಗಡೆ, ಪವಣ ಕಣಗಲಿ, ಅಜೀತ ಕರಜಗಿ, ಅವಿನಾಶ ನಲವಡೆ, ವಿಜಯ ಜರಳಿ, ಸಂತೋಷ ಮುಡಸಿ ಹಾಗೂ ನಗರದ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಏನೆ ಆಗಲಿ ಸಂಕೇಶ್ವರ ನಗರದ ವಿವಿಧ ರಾಜಕೀಯ ಮುಖಂಡರು ನಗರ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸುವ ಜನ ಈಗ ಜಾತ್ರೆಯ ಅಂಗವಾಗಿ ಎರಡು ಬಣ ಹೊಂದಿ ಆರೋಪ ಪ್ರತ್ಯಾರೋಪ ಮಾಡುವದು ನೋಡಿದರೆ ಜಾತ್ರೆಯಲ್ಲಿ ರಾಜಕೀಯ ವಾಸನೆ ಕಂಡು ಬರುತ್ತಿದೆ ಇದರಿಂದ ನಗರ ಅಭಿವೃದ್ಧಿಗೆ ಮಾರಕ ವಾಗಬಹುದು ಎಂದು ಜನ ಆಡಿಕೋಳ್ಳುತ್ತಿದ್ದಾರೆ.
ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.
