Chikkodi

ಕರ್ನಾಟಕ ರಾಜ್ಯ ರೈತ ಸಂಘ ಮೇಟಿ ಬಣದ ಚಿಕ್ಕೋಡಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ;

Share

ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೇಟಿ ಬಣದ ಸಭೆಯಲ್ಲಿ ಚಿಕ್ಕೋಡಿ ಜಿಲ್ಲೆ ಹಾಗೂ ವಿವಿಧ ತಾಲೂಕುಗಳ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು. ಸಂಘದ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ಅವರ ನೇತೃತ್ವದಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.

ಚಿಕ್ಕೋಡಿ ಜಿಲ್ಲಾಧ್ಯಕ್ಷರಾಗಿ ಪುಟ್ಟು ಖಾನಾಪೂರೆ,ಜಿಲ್ಲಾ ಉಪಾಧ್ಯಕ್ಷರಾಗಿ ಶಂಕರಗೌಡ ಪಾಟೀಲ,ಕಾರ್ಯಾಧ್ಯಕ್ಷರಾಗಿಜ್ಯೋತಿ ಕೆಂಪಟ್ಟಿ,ಚಿಕ್ಕೋಡಿ ತಾಲೂಕಾಧ್ಯಕ್ಷರಾಗಿ ಕಾಶಿನಾಥ ಕುರಣೆ,ರಾಯಬಾಗ ತಾಲೂಕಾಧ್ಯಕ್ಷರಾಗಿ ಅಶೋಕ ನಾಯಿಕ,ರಾಯಬಾಗ ತಾಲೂಕು ಉಪಾಧ್ಯಕ್ಷರಾಗಿ ಶ್ರೀಶೈಲ್ ಕುಂಬಾರಯವರನ್ನು ಆಯ್ಕೆ ಮಾಡಲಾಯಿತು.

ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅವರು, ಪ್ರಸ್ತುತ ರಾಜ್ಯದಲ್ಲಿ ರೈತರು ಸಾಲು ಸಾಲು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಿಕ್ಕಟ್ಟುಗಳ ಕುರಿತು ಗಂಭೀರವಾಗಿ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ತಕ್ಷಣವೇ ಉನ್ನತ ಮಟ್ಟದ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷ ಪುಟ್ಟು ಖಾನಾಪೂರೆ ಮಾತನಾಡಿ ಸಂಘಟನೆಯನ್ನು ಗ್ರಾಮೀಣ ಮಟ್ಟದವರೆಗೂ ವಿಸ್ತರಿಸಿ, ಪ್ರತಿಯೊಬ್ಬ ರೈತನಿಗೂ ಧ್ವನಿಯಾಗುವುದು ಮತ್ತು ಅವರಿಗೆ ಸೂಕ್ತ ಬೆಂಬಲ ನೀಡುವುದು ನನ್ನ ಮುಖ್ಯ ಧೈಯವಾಗಿದೆ ಎಂದರು.

ಬಳಿಕ ಚಿಕ್ಕೋಡಿ ತಾಲೂಕಾಧ್ಯಕ್ಷ ಕಾಶಿನಾಥ ಕುರಣೆ ಮಾತನಾಡಿ/ರೈತರು ಎದುರಿಸುತ್ತಿರುವ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದೇ ನಮ್ಮ ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಸುರೇಶಗೌಡ ಪಾಟೀಲ, ಬಸವರಾಜ ಕಪರಟ್ಟಿ ಮಹಾಸ್ವಾಮೀಜಿ, ರಾಜ್ಯ ಮಹಿಳಾ ಕಾರ್ಯದರ್ಶಿ ಕಮಲಾ ಪಾಟೀಲ, ಸದಾಶಿವ ಮುರಗುಡೆ, ಶಂಕರ ನಿಡಗುಂದಿ, ವಿಠ್ಠಲ ಮದಿಹಳ್ಳಿ, ಪುಂಡಲಿಕ ಕೆಂಪವಗೋಳ, ದಾನೇಶ್ವೇರಿ ಮೂಡಲಗಿ, ಮಾಲಾಶ್ರೀ‌ ಕುಲಗೂಡೆ, ನಮ್ರತಾ ಕುಲಗೂಡೆ, ಶೋಭಾ ಕುಲಗೂಡೆ, ರಾಧಿಕಾ ಶೇಲಾರೆ, ಸುನೀತಾ ಕುಲಗೂಡೆ, ಸಾವಿತ್ರಿ ಕುಲಗೂಡೆ, ಕವಿತಾ ಕುಲಗೂಡೆ, ಪಾರ್ವತಿ ಶೇಲಾರ ಸೇರಿದಂತೆ ಸಂಘದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

error: Content is protected !!