ಚನ್ನಮ್ಮನ ಕಿತ್ತೂರು ತಾಲೂಕಿನಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕಾರ್ಯದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ತಹಶೀಲ್ದಾರ ಕಲಗೌಡ ಪಾಟೀಲ ಅವರು ಸನ್ಮಾನಿಸಿ ಅಭಿನಂದಿಸಿದರು.

ಕಳೆದ ಜೂನ್ 30ರಿಂದ ಆರಂಭಗೊಂಡಿರುವ SIR ಕಾರ್ಯದಲ್ಲಿ ತಮ್ಮ ಮತಗಟ್ಟೆ ವ್ಯಾಪ್ತಿಯ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗೌಡಪ್ಪ ತಿ. ನಾಗನಗೌಡರ, ಬಸಪ್ಪ ಪಿ. ಬಾಳೇಕುಂದರಗಿ, ನಿರ್ಮಲಾ ಪಾಟೀಲ, ವಿರುಪಾಕ್ಷಿ ಸುಭೇದಾರ, ಈರಪ್ಪ ಪರುನವರ, ವಿಜಯ ಯಲಿಗಾರ, ನಾಗಪ್ಪ ಜೋಳದ, ಭರತ ಕಡೋಲಕರ, ಕಮಲವ್ವ ತೋರಣಗಟ್ಟಿ, ಪುಷ್ಪಲತಾ ಅಡವಿಸ್ವಾಮಿಮಠ ಹಾಗೂ ಬಸವರಾಜ ಹರಿಜನ ಅವರನ್ನು ತಹಶೀಲ್ದಾರರು ಸನ್ಮಾನಿಸಿ ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಕಲಗೌಡ ಪಾಟೀಲ, SIR ಕಾರ್ಯದಲ್ಲಿ ಪಾಲ್ಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆದಷ್ಟು ಬೇಗ ತಾಲೂಕಿನಾದ್ಯಂತ SIR ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚುನಾವಣೆ ಸಿರಸ್ತೆದಾರ ಪಿ.ವೈ. ಕೋರಿ, ಕಂದಾಯ ನಿರೀಕ್ಷಕ ಎಂ.ಎಂ. ನೀರಲಗಿ, ಸಿಬ್ಬಂದಿ ಚಿದಾನಂದ ಕಮ್ಮಾರ, ಗ್ರಾಮ ಆಡಳಿತಾಧಿಕಾರಿಗಳು, BLOಗಳು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಶಾನೂಲ ಮತ್ತೆಖಾನ
ಕಿತ್ತೂರು
