Belagavi

ನಿಮ್ಮ ವಾಹನಕ್ಕೆ ಯಾವ ಇಂಧನ ಬೇಕು? ಗ್ರಾಹಕರ ಹಕ್ಕು ಕಸಿಯುತ್ತಿದೆಯೇ ಇ-20 ಪೆಟ್ರೋಲ್?: ರಾಜಕುಮಾರ ಟೋಪಣ್ಣವರ ಗಂಭೀರ ಪ್ರಶ್ನೆ

Share

ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ವಾಹನವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿಯಮಾವಳಿಗಳನ್ನು ಪಾಲಿಸಿ ಅಗತ್ಯ ಅನುಮತಿಗಳನ್ನು ಪಡೆದ ನಂತರವೇ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ. ಇಂತಹ ವಾಹನಗಳನ್ನು ಖರೀದಿಸುವ ಗ್ರಾಹಕರು ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದರ ಜೊತೆಗೆ ಜಿಎಸ್‌ಟಿ, ರಸ್ತೆ ತೆರಿಗೆ, ನೋಂದಣಿ ಶುಲ್ಕ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸುತ್ತಾರೆ. ಆದ್ದರಿಂದ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಹಕ್ಕು ಗ್ರಾಹಕರಿಗೆ ಇರಬೇಕು ಎಂದು ರಾಜಕುಮಾರ ಟೋಪಣ್ಣವರ ಆಗ್ರಹಿಸಿದ್ದಾರೆ.

ಇಂದಿಗೂ ಹಲವು ವಾಹನ ತಯಾರಕರು ತಮ್ಮ ಕೆಲವು ಮಾದರಿಗಳಿಗೆ ಇ- 10 ಅಥವಾ ಅದಕ್ಕಿಂತ ಕಡಿಮೆ ಎಥನಾಲ್ ಮಿಶ್ರಣದ ಪೆಟ್ರೋಲ್‌ನ್ನು ಶಿಫಾರಸು ಮಾಡುತ್ತಿದ್ದಾರೆ. ಆದರೆ ಅಂತಹ ವಾಹನಗಳ ಮಾಲೀಕರಿಗೆ ಪ್ರಸ್ತುತ ಇ- 20 ಪೆಟ್ರೋಲ್ ಹೊರತುಪಡಿಸಿ ಬೇರೆ ಆಯ್ಕೆ ಇಲ್ಲದಂತಾಗಿದೆ. ಇದರಿಂದ ವಾಹನದ ಕಾರ್ಯಕ್ಷಮತೆ, ಮೈಲೇಜ್ ಹಾಗೂ ದೀರ್ಘಾವಧಿಯ ನಿರ್ವಹಣಾ ವೆಚ್ಚದ ಬಗ್ಗೆ ವಾಹನ ಸವಾರರಲ್ಲಿ ಆತಂಕ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವಾಹನ ಉದ್ಯಮವನ್ನು ಬೆಂಬಲಿಸುವ ಗ್ರಾಹಕರಿಗೆ ಸೂಕ್ತ ಇಂಧನದ ಆಯ್ಕೆಯನ್ನೇ ನಿರಾಕರಿಸುವುದು ನ್ಯಾಯಸಮ್ಮತವಲ್ಲ. ಯಾವುದೇ ಇಂಧನ ನೀತಿ ರೂಪಿಸುವಾಗ ಗ್ರಾಹಕರ ಹಕ್ಕುಗಳು ಹಾಗೂ ವಾಹನ ತಯಾರಕರ ಶಿಫಾರಸುಗಳಿಗೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆದ್ದರಿಂದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಬೆಳಗಾವಿ ಜಿಲ್ಲೆಯಲ್ಲಿ ಎಥನಾಲ್ ರಹಿತ ಪ್ರೀಮಿಯಂ ಪೆಟ್ರೋಲ್‌ಗಳಾದ ಎಕ್ಸ್ ಪಿ 100, ಪವರ್ 100 ಹಾಗೂ ಸ್ಪೀಡ್ 100 ಅನ್ನು ತಕ್ಷಣವೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದು ಕೇವಲ ಬೆಳಗಾವಿಯ ಬೇಡಿಕೆಯಲ್ಲ; ದೇಶದ ಪ್ರತಿಯೊಬ್ಬ ವಾಹನ ಮಾಲೀಕರಿಗೂ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆಯ್ಕೆ ಮಾಡುವ ಹಕ್ಕು ದೊರೆಯಬೇಕು ಎಂದು ರಾಜಕುಮಾರ ಟೋಪಣ್ಣವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

error: Content is protected !!