ಟಂಟಂ ಮಿನಿ ಪ್ಯಾಸೆಂಜರ್ ಅಟೋದಲ್ಲಿ ಜನ ಕೃಷಿ ಕೆಲಸಕ್ಕೆ ತಡರಳುತ್ತಿದ್ದ ವೇಳೆ ಚಾಲಕ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾದ ಪರಿಣಾಮ ಏಳು ಜನರಿಗೆ ಗಾಯವಾದ ಘಟನೆ ಧಾರವಾಡ ಹೊರವಲಯದ ಅಮ್ಮಿನಭಾವಿ ಬಳಿ ನಡೆದಿದ್ದು, ಬಾರಿ ಅನಾಹುತವೊಂದ ತಪ್ಪಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದಿಂದ ಅಮ್ಮಿನಬಾವಿ ಗ್ರಾಮಕ್ಕೆ ಕೃಷಿ ಜಮೀನಿನ ಕೆಲಸಕ್ಕೆಂದು ಜನರನ್ನು ಟಂಟಂ ಮೂಲಕ ಕರೆದುಕೊಂಡು ಬರಲಾಗುತ್ತಿತ್ತು. ಈ ವೇಳೆ ಅಮ್ಮಿನಬಾವಿ ಗ್ರಾಮದ ಬಳಿ ಟಂಟಂ ಪಲ್ಟಿಯಾಗಿದೆ. ಇದರಿಂದ ಟಂಟಂನಲ್ಲಿದ್ದ ಏಳು ಜನರಿಗೆ ಗಾಯಗಳಾಗಿವೆ. ಸದ್ಯಕ್ಕೆ ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
