ಬೆಳಗಾವಿ ನಗರದ ಬಹುನಿರೀಕ್ಷಿತ ಮೇಲ್ಸೇತುವೆ ಯೋಜನೆಗೆ ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈಲೆವೆಲ್ ಮೀಟಿಂಗ್ ನಡೆಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಸೆಪ್ಟೆಂಬರ್ ಅಂತ್ಯದೊಳಗಾಗಿ ಪಾಸಿಟಿವ್ಲಿ ಫ್ಲೈ ಓವರ್ ಕಾಮಗಾರಿಯನ್ನು ಶುರು ಮಾಡಲಿಕ್ಕೆ ಪ್ರಯಾಸವನ್ನು ಮಾಡ್ತಾ ಇದ್ದೀವಿ ಎಂದು ತಿಳಿಸಿದ್ದಾರೆ.


ಬೆಳಗಾವಿ ಡಿಸಿ ಕಚೇರಿಯಲ್ಲಿ ಬೆಳಗಾವಿ ನಗರದಲ್ಲಿ ಲೋಕೋಪಯೋಗಿ ಇಲಾಖೆ ಮುಖಾಂತರ ಡಿಸೈನ್ ಮಾಡಿರುವಂತಹ ಫ್ಲೈ ಓವರ್ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಮಹತ್ವದ ಸಮನ್ವಯ ಸಭೆ ಆಯೋಜನೆಗೊಂಡಿತ್ತು. ಸಭೆಯಲ್ಲಿ ಪೊಲೀಸ್ ಕಮಿಷನರ್, ಸಿಇಓ, ಡಿಸಿಎಫ್ ಹಾಗೂ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಅಧಿಕಾರಿಗಳು ಭಾಗಿಯಾಗಿದ್ದರು. ಸದ್ಯ 270 ಕೋಟಿ ರೂಪಾಯಿ ವೆಚ್ಚದ ಮೊದಲ ಹಂತದ ಫ್ಲೈ ಓವರ್ ಕಾಮಗಾರಿಗೆ ಪಿಡಬ್ಲ್ಯೂಡಿ ಇಲಾಖೆ ಮುಖಾಂತರ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಅವಧಿ ಆಗಸ್ಟ್ ತನಕ ಇರಲಿದೆ. ಸೆಪ್ಟೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಕ್ಲೋಸ್ ಆಗಿ ಅವಾರ್ಡ್ ಆಗಲಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದರ ಜೊತೆಗೆ ಇದೇ ವರ್ಷ ಸ್ಟೇಟ್ ಪಿಡಬ್ಲ್ಯೂಡಿ ಮುಖಾಂತರ ಎರಡನೇ ಹಂತದ ಫ್ಲೈ ಓವರ್ ಪ್ರಾಜೆಕ್ಟ್‌ಗಾಗಿ ಮತ್ತೊಂದು 250 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಮುಂದಿನ ಎರಡರಿಂದ ಮೂರು ತಿಂಗಳ ಒಳಗಡೆ ಅದರ ಡಿಸೈನ್ ಫೈನಲ್ ಮಾಡಿ ಕ್ಯಾಬಿನೆಟ್‌ಗೆ ಕಳುಹಿಸಿಕೊಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಸಂಚಾರ ದಟ್ಟಣೆ ತಪ್ಪಿಸಲು ಟ್ರಾಫಿಕ್ ಡೈವರ್ಷನ್ ಮ್ಯಾಪ್ ಅನ್ನು ಪೊಲೀಸ್ ಕಮಿಷನರ್ ಅವರು ರೆಡಿ ಮಾಡಿದ್ದು, ಪ್ರಿ-ಕನ್ಸ್ಟ್ರಕ್ಷನ್ ವರ್ಕ್ಸ್, ಟೆಂಪರರಿ ಬ್ಯಾರಿಕೇಡಿಂಗ್ ಹಾಗೂ ರಸ್ತೆಗಳ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗಾಗಿಯೇ 270 ಕೋಟಿ ರೂಪಾಯಿಗಳಲ್ಲಿ 3 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇನ್ನು ಕಾಮಗಾರಿ ವೇಳೆ ಹೆಸ್ಕಾಮ್, ವಾಟರ್ ಮತ್ತು ಸಿವೇಜ್ ಲೈನ್‌ಗಳನ್ನು ಶಿಫ್ಟ್ ಮಾಡಲು ಯುಟಿಲಿಟಿ ಶಿಫ್ಟಿಂಗ್ ಕಾಂಪೋನೆಂಟ್ ಅಡಿಯಲ್ಲಿ ಎಸ್ಟಿಮೇಟ್ ಜೋಡಿಸಲಾಗಿದೆ. ಯೋಜನೆಯ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಕಟಾವ್ ಮಾಡದೇ, ಸಾರ್ವಜನಿಕ ಸ್ಪೇಸ್‌ಗಳು ಮತ್ತು ಸರ್ಕಾರಿ ಜಾಗಗಳಲ್ಲಿ 1-2 ಕಿಲೋಮೀಟರ್ ರೇಡಿಯಸ್ ಒಳಗಡೆ ಪ್ರತಿ ಟ್ರೀಯನ್ನು ಟ್ರಾನ್ಸ್ ಲೊಕೇಟ್ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಾರ್ವಜನಿಕರು ಹಾಗೂ ಉದ್ಯಮಿಗಳಿಗೆ ತೊಂದರೆಯಾಗದಂತೆ ಕೈಜೋಡಿಸಿಕೊಂಡು ಕೆಲಸ ಮಾಡಲು ಶೀಘ್ರದಲ್ಲೇ ಬ್ರಾಡ್ ಕನ್ಸಲ್ಟೇಷನ್ ಮೀಟಿಂಗ್ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
