ತಾಲೂಕಿನ ನಾಗರಾಳ ಗ್ರಾಮದಲ್ಲಿ ಶ್ರೀ ನಾಥ ಸಂತಾಚಾ ದರಬಾರ ಸದ್ಭಕ್ತರಿಂದ ಆಯೋಜಿಸಲಾಗಿರುವ 5 ನೇ ವರ್ಷದ ಪಂಡರಪೂರ ಆಷಾಢಿ ಪಾಯಿ ದಿಂಡಿಗೆ ಭಕ್ತಿ ಮತ್ತು ಸಡಗರದಿಂದ ಚಾಲನೆ ನೀಡಲಾಯಿತು.


ಗ್ರಾಮದ ವಿಠ್ಠಲ-ರುಕ್ಮಿಣಿ ಭಕ್ತರು ಹಾಗೂ ಸದ್ಭಕ್ತ ಮಂಡಳಿಯವರು ಒಗ್ಗೂಡಿ ಸ್ಥಳೀಯ ವಿಠ್ಠಲ-ರುಕ್ಮೀಣಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಗ್ರಾಮದಾದ್ಯಂತ ಭಜನೆ-ಕೀರ್ತನೆಗಳೊಂದಿಗೆ ಭಕ್ತಿಭಾವದಿಂದ ಪ್ರದಕ್ಷಿಣೆ ಹಾಕುವ ಮೂಲಕ ಈ ಪವಿತ್ರ ಪಾದಯಾತ್ರೆಗೆ ಆರಂಭ ನೀಡಿದರು. ನಾಗರಾಳದಿಂದ ಪ್ರಾರಂಭವಾಗಿರುವ ಈ ನಡಿಗೆಯು ಜುಲೈ 26, 2026 ರವರೆಗೆ ಸಾಗಲಿದೆ.

ಈ ಸಂದರ್ಭದಲ್ಲಿ ಸುನೀಲ ಮಾಳಿ ಹಾಗೂ ಸಾಹುಕಾರ ಕಾಂಡಗಾವೆ ಅವರು ಮಾತನಾಡಿ ನಾಗರಾಳದಿಂದ ಹೊರಟಿರುವ ಈ ಪಾಯಿ ದಿಂಡಿಯು ಸತತ 8 ದಿನಗಳ ಕಾಲ ನಿರಂತರವಾಗಿ ಸಾಗಲಿದೆ. ಭಕ್ತರೆಲ್ಲರೂ ಲೌಕಿಕ ಚಿಂತೆಗಳನ್ನು ಮರೆತು, ಕೇವಲ ಪಾಂಡುರಂಗನ ನಾಮಸ್ಮರಣೆ ಹಾಗೂ ಭಕ್ತಿಯಲ್ಲಿ ಲೀನರಾಗಿ ಹೆಜ್ಜೆ ಹಾಕಲಿದ್ದಾರೆ. ಈ ಪವಿತ್ರ ಯಾತ್ರೆಯಲ್ಲಿ ಸುಮಾರು 200ಕ್ಕೂ ಅಧಿಕ ಭಕ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಾಹುಕಾರ ಕಾಂಡಗಾವೆ,ನರಸು ಬಿಕುಮಾಳಿ,ಮಲ್ಲು ಪಾರಗಾವೆ,
ಅಣ್ಣಾಸಾಹೇಬ ಖಾನಾಪೂರೆ,ನಾನಾ ಮಾಳಿ,ಪ್ರೀತಂ ಮಾಳಿ,
ಮುರಳಿ ಮಹಾರಾಜ,ಶಿವಾ ಮಾಳಿ,ಶ್ರೀಶೈಲ ಪಾರಗಾವೆ,
ಗಣು ಮಾಳಿ,ಗಜು ಮಾಳಿ,ಸಂತೋಷ ಮಾಳಿ,
ರಾಮ ಮಾಳಿ,ಬಬಲು ಮಾಳಿ, ಶಿವಾಜಿ ಕಾಂಡಗಾವಿ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.
ಒಟ್ಟಿನಲ್ಲಿ ಇಡೀ ನಾಗರಾಳ ಗ್ರಾಮವು ವಿಠ್ಠಲ ನಾಮಸ್ಮರಣೆಯಿಂದ ಪುಳಕಿತಗೊಂಡಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
