ಕಳೆದ ದಿನ ಧಾರವಾಡ ಬಾರಾಕೋಟ್ರೀ ರಾಂಕ್ ಸ್ಟೇಲೋ ಅಪಾರ್ಟ್ಮೆಂಟನಲ್ಲಿ ನಡೆದಿದ್ದ ವೈದ್ಯ ಡಾ. ಕಿರಿಣ ಹತ್ಯೆ ಹಾಗೂ ಮಗುವಿಗೆ ಚಾಕು ಇರಿತ ಪ್ರಕರಣದಲ್ಲಿ, ಮಗುವಿನಜೀವ ರಕ್ಷಣೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಪ್ರಯತ್ನ ಫಲಿಸಿದೆ.

ಹೌದು… ಖಾಸಗಿ ಆಸ್ಪತ್ರೆಯ ಅರವಳಿಕೆ ತಜ್ಞ ಡಾ. ಕಿರಣ ಅವರನನ್ನು ಅಪಾರ್ಟ್ಮೆಂಟ್ ರೂಮನಲ್ಲಿ ಬರ್ಬವಾಗಿ ಹತ್ಯೆ ಮಾಡಲಾಗಿತ್ತು. ಜತೆಗೆ ಡಾ.ಕಿರಣ ಪುತ್ರ ನೇಹಿತ್ ಮೇಲೆಯೂ ಚಾಕುವಿನಿಂದ ದಾಳಿ ಮಾಡಲಾಗಿದ್ದು, ಅಕ್ಕಕ್ಕದವರು ಸೇರಿ ಕುಟುಂಬಸ್ಥರು ಬಾಗಿಲು ತೆರೆದ ಸಂದರ್ಭದಲ್ಲಿ ಡಾ.ಕಿರಣ ಹತ್ಯೆ ಬೆಳಕಿಗೆ ಬಂದಿತ್ತು. ಇನ್ನೊಂದು ರೂಮಿನಲ್ಲಿ ಎಂಟು ವರ್ಷ ಮಗು ನೇಹಿತ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅದೇ ರೂಮಿನ ಬೇಡ್ ಮೇಲೆ ತಾಯಿ ಮೊಬೈಲ್ ಸ್ಕ್ರಾಲ್ ಮಾಡು ಬೇಡ ಮೇಲೆ ಇದ್ದಳು. ಈ ಸುದ್ದಿ ಪೊಲೀಸ್ ಇಲಾಖೆ ತಿಳಿಯುತ್ತಿದಂತೆ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಮಗುವಿನ ಉಸಿರಾಟ ಗಮನಿಸಿ ಸ್ವತಃ ತಾವೇ ಮಗುವಿನ ಎತ್ತಿಕೊಂಡು ಬಂದು ಸಿಬ್ಬದಿಗೆ ಕೊಟ್ಟು ಆಸ್ಪತ್ರೆಗೆ ದಾಖಲುಸಿ ಮಗು ಉಸಿರಾಡುತ್ತಿದೆ ಎಂದು ತಿಳಿಸಿದರು. ಈ ಪ್ರಯತ್ನ ಈಗ ಫಲ ಸಿಕ್ಕಿದೆ. ಆರಂಭದಲ್ಲಿ ಮಗುವಿಗೆ ಧಾರವಾಡದ ಬಿ ಡಿ ಜತ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಈಗ ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಎಸ್ಡಿಎಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರವರ ಮಗುವಿನ ಜೀವ ಉಳಿಸುವ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಕಮಿಷನರ್ ನಡೆಗೆ ಈಗ ಜನ ಮೆಚ್ಚುಗೆಗೆ ಕಾರಣವಾಗಿದೆ.
