Dharwad

ಧಾರವಾಡದಲ್ಲಿ ಭೀಕರ ಅಗ್ನಿ ಅನಾಹುತ: ಕೊಟ್ಟಿಗೆಗೆ ಬಿದ್ದ ಆಕಸ್ಮಿಕ ಬೆಂಕಿಗೆ ೧೨ ಜಾನುವಾರುಗಳು ಸಜೀವ ದಹನ, ರೈತರು ಕಂಗಾಲು!

Share

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಬರೋಬ್ಬರಿ ಹನ್ನೆರಡು ಜಾನುವಾರುಗಳು ಸಜೀವ ದಹನವಾಗಿರುವ ಘೋರ ಘಟನೆ ಸಂಭವಿಸಿದೆ. ರೈತರ ಜೀವನಾಧಾರವಾಗಿದ್ದ ದನದ ಕೊಟ್ಟಿಗೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರೈತ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಒಟ್ಟು ೧೨ ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿವೆ. ಗ್ರಾಮದ ರೈತರಾದ ಸಾಗರ ಅಸುಂಡಿ ಹಾಗೂ ಧರಣೇಂದ್ರ ಅಸುಂಡಿ ಎಂಬುವವರಿಗೆ ಸೇರಿದ ಎರಡು ದನದ ಕೊಟ್ಟಿಗೆಗಳು ಸಂಪೂರ್ಣ ನಾಶವಾಗಿದ್ದು, ಧರಣೇಂದ್ರ ಅವರಿಗೆ ಸೇರಿದ ಎರಡು ಆಕಳು, ಮೂರು ಎಮ್ಮೆ, ಎರಡು ಆಕಳ ಕರುಗಳು ಹಾಗೂ ಸಾಗರ ಅವರಿಗೆ ಸೇರಿದ ಮೂರು ಎಮ್ಮೆ ಮತ್ತು ಎರಡು ಎಮ್ಮೆ ಕರುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಜಾನುವಾರುಗಳ ಸಾವಿನ ಜೊತೆಗೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಟ್ರ್ಯಾಕ್ಟರ್‌ನಷ್ಟು ಮೇವು ಕೂಡ ಸಂಪೂರ್ಣವಾಗಿ ಭಸ್ಮವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!